Telangana: 10 ನೇ ತರಗತಿ ವಿದ್ಯಾರ್ಥಿನಿಗೆ ಶಾಲೆ ಬಳಿಯೇ ಹೃದಯಾಘಾತ; ಬಾಲಕಿ ಸಾವು

Telangana: ಶಾಲೆಗೆ ನಡೆದುಕೊಂಡು ಹೋಗುತ್ತಿದ್ದಾಗಲೇ ಹತ್ತನೇ ತರಗತಿಯ ವಿದ್ಯಾರ್ಥಿನಿಯೋರ್ವಳು ಹೃದಯಾಘಾತದಿಂದ ಮೃತಪಟ್ಟ ಘಟನೆ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ಗುರುವಾರ ಈ ಘಟನೆ ನಡೆದಿದೆ.

ರಾಮರೆಡ್ಡಿ ಮಂಡಲದ ಸಿಂಗರಾಯಪಲ್ಲಿ ಗ್ರಾಮದ ನಿಧಿ (16) ಮೃತ ವಿದ್ಯಾರ್ಥಿನಿ.
ಕಾಮರೆಡ್ಡಿಯಲ್ಲಿರುವ ಖಾಸಗಿ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿಯಾಗಿದ್ದ ನಿಧಿ, ಎಂದಿನಂತೆ ಶಾಲೆಗೆ ತೆರಳಿದ್ದಾಳೆ. ಶಾಲೆಯ ಬಳಿಯೇ ಈಕೆಗೆ ಎದೆನೋವು ಕಾಣಿಸಿಕೊಂಡು, ಕುಸಿದು ಬಿದ್ದಿದ್ದಾಳೆ. ಇದನ್ನು ಕಂಡು ಶಾಲೆಯ ಶಿಕ್ಷಕರು ಹತ್ತಿರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವೈದ್ಯರು ಪರೀಕ್ಷೆ ಮಾಡಿ, ಸಿಪಿಆರ್ , ಪ್ರಾಥಮಿಕ ಚಿಕತ್ಸೆ ನೀಡಿದರೂ ವಿದ್ಯಾರ್ಥಿನಿಯ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡು ಬಂದಿಲ್ಲ. ಹೀಗಾಗಿ ಹೆಚ್ಚಿನ ಚಿಕಿತ್ಸೆಗೆಂದು ಇನ್ನೊಂದು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಲ್ಲಿ ವೈದ್ಯರು ಪರಿಶೀಲನೆ ಮಾಡಿದಾಗ ವಿದ್ಯಾರ್ಥಿನಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಹೇಳಿದ್ದಾರೆ.
ಮಗಳನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.
Comments are closed.