Delhi: ದೆಹಲಿ ನೂತನ ಸರ್ಕಾರದಲ್ಲಿ ಸಚಿವರಿಗೆ ಖಾತೆ ಹಂಚಿಕೆ – ಯಾರಿಗೆ ಯಾವ ಖಾತೆ?

Delhi: ದೆಹಲಿಯಲ್ಲಿ ಹೊಸ ಸರ್ಕಾರ ಜಾರಿಗೆ ಬಂದಿದೆ. ಬರೋಬ್ಬರಿ 27 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯ ಅಧಿಕಾರವನ್ನು ಬಿಜೆಪಿ ತನ್ನ ತೆಕ್ಕೆಗೆ ಪಡೆದಿದೆ.
ಭಾರಿ ಕುತೂಹಲದ ನಡುವೆ ರೇಖಾ ಗುಪ್ತ ಅವರು ದೆಹಲಿ ಮುಖ್ಯಮಂತ್ರಿ ಆಗಿ ಆಯ್ಕೆಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಬೆನ್ನಲ್ಲೇ ನೂತನ ಸಚಿವರಿಗೆ ಖಾತೆ ಹಂಚಿಕೆಯು ನಡೆದಿದೆ. ಹಾಗಿದ್ರೆ ಯಾವ ಸಚಿವರಿಗೆ ಯಾವ ಖಾತೆ ನೋಡೋಣ ಬನ್ನಿ.
1. ರೇಖಾ ಗುಪ್ತಾ (ಮುಖ್ಯಮಂತ್ರಿ) – ಗೃಹ, ಹಣಕಾಸು, ಸೇವೆಗಳು, ವಿಚಕ್ಷಣೆ, ಯೋಜನೆ
2. ಪರ್ವೇಶ್ ವರ್ಮಾ (ಉಪ ಮುಖ್ಯಮಂತ್ರಿ) – ಶಿಕ್ಷಣ, ಲೋಕೋಪಯೋಗಿ, ಸಾರಿಗೆ
3. ಮಂಜಿಂದರ್ ಸಿಂಗ್ ಸಿರ್ಸಾ – ಆರೋಗ್ಯ, ನಗರಾಭಿವೃದ್ಧಿ, ಕೈಗಾರಿಕೆ
4. ರವೀಂದ್ರ ಕುಮಾರ್ ಇಂದ್ರಜ್ – ಸಮಾಜ ಕಲ್ಯಾಣ, ಎಸ್ಸಿ/ಎಸ್ಟಿ ವ್ಯವಹಾರ, ಕಾರ್ಮಿಕ
5. ಕಪಿಲ್ ಮಿಶ್ರಾ – ಜಲ, ಪ್ರವಾಸೋದ್ಯಮ, ಸಂಸ್ಕೃತಿ
6. ಆಶಿಶ್ ಸೂದ್ – ಕಂದಾಯ, ಪರಿಸರ, ಆಹಾರ ಮತ್ತು ನಾಗರಿಕ ಸರಬರಾಜು
7. ಪಂಕಜ್ ಕುಮಾರ್ ಸಿಂಗ್ – ಕಾನೂನು, ಶಾಸಕಾಂಗ ವ್ಯವಹಾರ, ವಸತಿ
Comments are closed.