Kolara: ಜ್ವರಕ್ಕೆ ಇಂಜೆಕ್ಷನ್ ಪಡೆದ ಯುವಕ ಕೆಲವೇ ಹೊತ್ತಲ್ಲಿ ಸಾವು !!

Kolara: ಯುವಕನೋರ್ವ ಜ್ವರ ಬಂದಿದೆ ಎಂದು ಆಸ್ಪತ್ರೆಗೆ ತೆರಳಿ ಇಂಜೆಕ್ಷನ್ ಪಡೆದ ಬಳಿಕ ಕೆಲವೇ ಹೊತ್ತಿನಲ್ಲಿ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ವಿನೋದ್ (23) ಎಂಬ ಯುವಕ ಕಳೆದ ಎರಡು ಮೂರು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ. ವಿನೋದ್‌ರನ್ನು ವಕ್ಕಲೇರಿಯಲ್ಲಿರುವ ಸನ್ ರೈಸ್ ಕ್ಲಿನಿಕ್ ನ ವೈದ್ಯ ಡಾ. ರಫೀಕ್ ಎಂಬುವವರ ಬಳಿ ಕರೆದೊಯ್ಯಲಾಗಿತ್ತು. ಈ ವೇಳೆ ವೈದ್ಯ ಡಾ. ರಫೀಕ್ ಇಂಜೆಕ್ಷನ್ ನೀಡಿ ಕಳುಹಿಸಿದ್ದರು.
ಇದಾಗಿ ಕೆಲವೇ ಹೊತ್ತಿನಲ್ಲಿ ಯುವಕ ಸಾವನ್ನಪ್ಪಿದ್ದು, ವೈದ್ಯರ ನಿರ್ಲಕ್ಷ್ಯದಿಂದಲೇ ವಿನೋದ್ ಮೃತಪಟ್ಟಿದ್ದಾನೆ ಎಂದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಈ ಘಟನೆಗೆ ಸಂಬಂಧಪಟ್ಟಂತೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
Comments are closed.