of your HTML document.

Creature: ಲೈಂಗಿಕ ಕ್ರಿಯೆ ಬಳಿಕ ಮರ್ಮಾಂಗವನ್ನೇ ಕತ್ತರಿಸಿಕೊಳ್ಳುತ್ತೆ ಈ ಜೀವಿ !!

Creature: ನಮ್ಮ ಸುತ್ತಮುತ್ತಲಿನ ಪರಿಸರ ಕೌತುಕಗಳ ಆಗರ. ನಿಸರ್ಗದಲ್ಲಿ ಏನು ನಡೆಯುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಈ ವಿಷ್ಮಯಕಾರಿ ಜಗತ್ತಿನ ಬಗ್ಗೆ ಮನುಷ್ಯ ತಿಳಿದುಕೊಳ್ಳಬೇಕಾದ ವಿಚಾರ ಸಮುದ್ರದಷ್ಟಿದೆ. ಈಗ ತಿಳಿದುಕೊಂಡಿರುವುದು ಒಂದು ಬೊಗಸೆಯಷ್ಟು ಮಾತ್ರ. ಅಂತೆಯೇ ಇದೀಗ ನಾವು ಒಂದು ಪ್ರಾಣಿಯ ಅಚ್ಚರಿ ವಿಚಾರವೊಂದನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

ಜೀವಿಗಳಲ್ಲಿ ಲೈಂಗಿಕತೆ ಎಂಬುದು ಸಹಜವಾದದ್ದು. ಅದು ಪ್ರಕೃತಿದತ್ತವಾದದ್ದು. ಮನುಷ್ಯ, ಪ್ರಾಣಿ, ಪಕ್ಷಿ, ಸಸ್ಯ ಸಂಕುಲ ಎನ್ನದೆ ಎಲ್ಲ ಜೀವಿಗಳಲ್ಲಿಯೂ ಇದು ನಡೆದೇ ತರುತ್ತದೆ. ಆದರೆ ಅಚ್ಚರಿಯೇನೆಂದರೆ ಇಲ್ಲೊಂದು ಜೀವಿ ಲೈಂಗಿಕ ಕ್ರಿಯೆ ಬಳಿಕ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಳ್ಳುತ್ತದೆಯಂತೆ.!!

ಹೌದು, ಸೀ ಸ್ಲಗ್​ಗಳು ಒಂದು ರೀತಿಯ ಸಮುದ್ರ ಜೀವಿ. ಇದು ಕ್ರೋಮೋಡೋರಿಸ್ ರೆಟಿಕ್ಯುಲೇಟ್ ಪ್ರಬೇಧಕ್ಕೆ ಸೇರಿದ್ದು, ಪೆಸಿಫಿಕ್‌ ಸಮುದ್ರದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಇವುಗಳು ಸಂಕೀರ್ಣವಾದ ಲೈಂಗಿಕ ಜೀವನವನ್ನು ಹೊಂದಿದೆ. ಬಿಸಾಡಬಹುದಾದ ಮರ್ಮಾಂಗದೊಂದಿಗೆ ಪದೇ ಪದೆ ಸಂಭೋಗಿಸಬಲ್ಲ ಮೊದಲ ಜೀವಿ ಇದಾಗಿದೆ ಎಂದು ಜಪಾನ್​ ಸಂಶೋಧಕರು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ಅಧ್ಯಯನ ವರದಿಯನ್ನು ರಾಯಲ್ ಸೊಸೈಟಿಯ ಜರ್ನಲ್ ಬಯಾಲಜಿ ಲೆಟರ್ಸ್‌ನಲ್ಲಿ ಪ್ರಕಟಿಸಲಾಗಿದೆ. ಈ ಸೀ ಸ್ಲಗ್​ಗಳು ಗಂಡು ಮತ್ತು ಹೆಣ್ಣಿನ ಲೈಂಗಿಕ ಅಂಗಗಳನ್ನು ಹೊಂದಿದ್ದು, ಎರಡನ್ನೂ ಒಂದೇ ಸಮಯದಲ್ಲಿ ಬಳಸಬಹುದಾಗಿದೆ.

ಸೀ ಸ್ಲಗ್​ಗಳಲ್ಲಿ ಜನನಾಂಗಗಳು ದೇಹದ ಬಲಭಾಗದಲ್ಲಿರುತ್ತವೆ ಮತ್ತು ಎರಡೂ ಒಟ್ಟಿಗೆ ಇದ್ದು, ಒಂದಕ್ಕೊಂದು ಎದುರುಬದುರಾಗಿ ಇರುತ್ತವೆ. ಅಂದರೆ, ಶಿಶ್ನವು ಇನ್ನೊಂದರ ಹೆಣ್ಣಿನ ಅಂಗಕ್ಕೆ ಹೊಂದಿಕೊಂಡಿರುತ್ತದೆ. ಎರಡೂ ಕೂಡ ಪರಸ್ಪರ ವೀರ್ಯವನ್ನು ಬಿಡುಗಡೆ ಮಾಡುತ್ತವೆ. ನಾನು ಈ ಮೊದಲು ಇಂತಹದ್ದನ್ನು ನೋಡೇ ಇಲ್ಲ ಎಂದು ಬರ್ಡಾಡ್​ ಹೇಳಿದ್ದಾರೆ. ಜಪಾನ್‌ನ ಸುತ್ತಮುತ್ತಲಿನ ಆಳವಿಲ್ಲದ ಹವಳದ ದಿಬ್ಬಗಳಿಂದ ಸಂಗ್ರಹಿಸಿದ ಸೀ ಸ್ಲಗ್​ಗಳನ್ನು ಜಪಾನಿನ ಸಂಶೋಧನಾ ತಂಡ ಪರಿಶೀಲಿಸಿದ್ದು, ಅವುಗಳು 31 ಬಾರಿ ಸಂಭೋಗಿಸುವುದನ್ನು ನೋಡಿದ್ದಾರೆ. ಈ ಕ್ರಿಯೆಯು ಕೆಲವು ಸೆಕೆಂಡುಗಳಿಂದ ಕೆಲವು ನಿಮಿಷಗಳವರೆಗೆ ನಡೆಯಿತು. ನಂತರ ಆ ಜೀವಿಗಳು ತಮ್ಮ ಶಿಶ್ನಗಳನ್ನು ಉದುರಿಸುವುದು ಕಂಡುಬಂದಿದೆ.

Comments are closed.