Chikkamagaluru : ಕಾಫಿನಾಡಲ್ಲಿ ಬೆಂಗಳೂರು ಪ್ರೇಮಿಗಳ ದುರಂತ ಅಂತ್ಯ – ಗರ್ಲ್‌ಫ್ರೆಂಡ್‌ ಕೊಂದು ಆತ್ಮಹತ್ಯೆಗೆ ಶರಣಾದ ಬಾಯ್‌ಫ್ರೆಂಡ್‌!

Share the Article

Chikkamagaluru : ಕಾಫಿನಾಡಿನಲ್ಲಿ ಪ್ರೇಮಿಗಳ ದುರಂತ ಅಂತ್ಯವಾಗಿದ್ದು, ಪ್ರೇಯಸಿಯನ್ನು ಕೊಂದು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಕಾರಿನಲ್ಲಿ ಯುವತಿಯ ಶವ ಕಂಡುಬಂದಿದೆ. ಸ್ವಲ್ಪ ದೂರದ ಮರದಲ್ಲಿ ಯುವಕನ ಶವ ನೇತಾಡುತ್ತಿರುವುದು ಪತ್ತೆಯಾಗಿದೆ. ಬೆಂಗಳೂರಿನ ಇಬ್ಬರ ಮೃತದೇಹ ಚಿಕ್ಕಮಗಳೂರು ಬಳಿ ಪತ್ತೆಯಾಗಿದ್ದು, ಸಾವಿನ ಸುತ್ತ ಸಾಕಷ್ಟು ಅನುಮಾನಗಳು ಮೂಡಿತ್ತು. ಇದೀಗ ಪೊಲೀಸರು ಪ್ರಕರಣವನ್ನು ಬೇಧಿಸಿದ್ದಾರೆ. ಬುಧವಾರ ಇವರಿಬ್ಬರೂ ಚಿಕ್ಕಮಗಳೂರಿಗೆ ಪ್ರವಾಸಕ್ಕೆ ಬಂದಿದ್ದು, ಯುವತಿಯನ್ನು ಕೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಚಿಕ್ಕಮಗಳೂರಿನ ಪೂರ್ಣಿಮ, ಭದ್ರಾವತಿಯ ಮಧು ಇಬ್ಬರು ಪ್ರೇಮಿಗಳಾಗಿದ್ದು, ಕಾರಿನಲ್ಲಿ ಯುವತಿ ಪೂರ್ಣಿಮ ಶವ ಪತ್ತೆಯಾದರೆ, ಹತ್ತಿರದ ಕಾಫಿ ತೋಟದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.