Froud : ʼಮ್ಯಾಟ್ರಿಮೊನಿ’ ಯಲ್ಲಿ ಪರಿಚಯವಾದ 15ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ – 26ರ ಯುವಕ ಅರೆಸ್ಟ್!!

Share the Article

Froud: ಮದುವೆಯಾಗದೆ ಪರಿತಪಿಸುವ ಅನೇಕ ಯುವಕ ಯುವತಿಯರು ಇಂದು ಮ್ಯಾಟ್ರಿಮೋನಿ ಶಾದಿ.com ನಂತಹ ಅನೇಕ ಆಪ್‌ಗಳ ಮುಖಾಂತರ ತಮ್ಮ ಸಂಗಾತಿಯನ್ನು ಹುಡುಕಿಕೊಂಡು ದಾಂಪತ್ಯಕ್ಕೆ ಕಾಲಿರಿಸುತ್ತಿದ್ದಾರೆ. ಆದರೆ ಇನ್ನೊಬ್ಬ ಪಾಪಿ ಈ ಮ್ಯಾಟ್ರಿಮೋನಿಯನ್ನು ಬಳಸಿಕೊಂಡು ಸುಮಾರು 15ಕ್ಕು ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಗುಜರಾತ್ ಮೂಲದ 26 ವರ್ಷದ ಹಿಮಾಂಶು ಯೋಗೇಶ್‌ಭಾಯ್ ಪಂಚಾಲ್ ಎಂಬಾತ ಮ್ಯಾಟ್ರಿಮೊನಿಯಲ್ ವೆಬ್‌ಸೈಟ್‌ಗಳಲ್ಲಿ ಪರಿಚಯವಾದ 15ಕ್ಕೂ ಹೆಚ್ಚು ಮಹಿಳೆಯರ ಮೇಲೆ ಮದುವೆಯ ಆಮಿಷವೊಡ್ಡಿ ಅತ್ಯಾಚಾರವೆಸಗಿದ್ದಾನೆ. ಸದ್ಯ ಈತನನ್ನು ಮಹಾರಾಷ್ಟ್ರದ ವಾಲಿವ್ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ನಕಲಿ ಪ್ರೊಫೈಲ್ ರಚಿಸಿ, ತನ್ನನ್ನು ದೆಹಲಿ ಕ್ರೈಂ ಬ್ರಾಂಚ್‌ನ ಸೈಬರ್ ಸೆಕ್ಯುರಿಟಿ ವಿಭಾಗದ ಅಧಿಕಾರಿಯೆಂದು ಹೇಳಿಕೊಂಡಿದ್ದ. ಅಲ್ಲದೆ, ಶ್ರೀಮಂತ ಕುಟುಂಬದವನೆಂದೂ, ಹಲವು ಆಸ್ತಿಗಳ ಒಡೆಯನೆಂದೂ ನಂಬಿಸಿದ್ದ. ಯುವತಿಯರನ್ನು ಸಂಪರ್ಕಿಸಿ, ವಾಸೈ, ಮುಂಬೈ ಮತ್ತು ಅಹಮದಾಬಾದ್‌ನ ಹೋಟೆಲ್‌ಗಳಿಗೆ ಕರೆಸಿ, ಮದುವೆಯಾಗುವ ಭರವಸೆ ನೀಡಿ, ನಕಲಿ ವಜ್ರದ ಆಭರಣಗಳನ್ನು ಉಡುಗೊರೆಯಾಗಿ ನೀಡಿ, ಮೊದಲ ಭೇಟಿಯಲ್ಲೇ ದೈಹಿಕ ಸಂಬಂಧ ಬೆಳೆಸುವಂತೆ ಒತ್ತಾಯಿಸುತ್ತಿದ್ದ. ನಂತರ, ಹಣಕ್ಕಾಗಿ ಬೇಡಿಕೆಯಿಟ್ಟು, ಲೈಂಗಿಕವಾಗಿ ಮತ್ತು ಆರ್ಥಿಕವಾಗಿ ಶೋಷಿಸಿದ ನಂತರ ಸಂಪರ್ಕವನ್ನು ನಿಲ್ಲಿಸುತ್ತಿದ್ದ.

ಫೆಬ್ರವರಿ 6 ರಂದು ಮೀರಾ ರಸ್ತೆಯ 31 ವರ್ಷದ ಮಹಿಳೆಯೊಬ್ಬರು ವಾಲಿವ್ ಪೊಲೀಸರನ್ನು ಭೇಟಿಯಾಗಿ, ಪಂಚಾಲ್ ತನ್ನನ್ನು ಮ್ಯಾಟ್ರಿಮೊನಿಯಲ್ ವೆಬ್‌ಸೈಟ್‌ನಲ್ಲಿ ಸಂಪರ್ಕಿಸಿ, ನಕಲಿ ವಜ್ರದ ನೆಕ್ಲೆಸ್ ಉಡುಗೊರೆಯಾಗಿ ನೀಡಿ, ಅತ್ಯಾಚಾರವೆಸಗಿದ್ದಾನೆ ಎಂದು ದೂರು ದಾಖಲಿಸಿದ್ದರು. ವಾಸೈ ಮತ್ತು ಅಹಮದಾಬಾದ್‌ನ ಎರಡು ಹೋಟೆಲ್‌ಗಳ ಹೆಸರನ್ನು ಸಹ ಅವರು ಉಲ್ಲೇಖಿಸಿದ್ದರು. ಸದ್ಯ ಈ ಒಂದು ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ಆರೋಪಿಗೆ ಬಲೇ ಬೀಸಿ ಆತನನ್ನು ಬಂಧಿಸಿದ್ದಾರೆ.

Comments are closed.