Udupi: ಖಾಸಗಿ ಫೈನಾನ್ಸ್ ಮಾಲಕ ಹೃದಯಾಘಾತದಿಂದ ಸಾವು

Udupi: ಖಾಸಗಿ ಫೈನಾನ್ಸ್ ಮಾಲಕರೋರ್ವರು ಹೃದಯಾಘಾತದಿಂದ ಮನೆಯಲ್ಲಿ ಕುಸಿದು ಬಿದ್ದು ಸಾವಿಗೀಡಾಗಿರುವ ಘಟನೆ ನಡೆದಿದೆ. ಮುರಳೀಧರ್ ಬಲ್ಲಾಳ್ (56) ಮೃತ ವ್ಯಕ್ತಿ. ಉಡುಪಿಯ ಮಿತ್ರ ಆಸ್ಪತ್ರೆಯ ಎದುರಿನ ರಸ್ತೆಯಲ್ಲಿರುವ ಬಲ್ಲಾಳ್ ಫೈನಾನ್ಸ್ ಮಾಲಕ, ಕಿನ್ನಿಮೂಲ್ಕಿ ಕನ್ನರ್ಪಾಡಿ ನಿವಾಸಿಯಾಗಿದ್ದಾರೆ. ಕುಸಿದು ಬಿದ್ದ ತಕ್ಷಣ ಇವರನ್ನು ಕೂಡಲೇ ಮನೆ ಮಂದಿ ಉಡುಪಿ ಖಾಸಗಿ ಆಸ್ಪತ್ರಗೆ ದಾಖಲು ಮಾಡಿದ್ದರು. ವೈದ್ಯರು ಪರೀಕ್ಷೆ ಮಾಡಿದಾಗ ಸಾವಿಗೀಡಾಗಿರುವುದಾಗಿ ತಿಳಿಸಿದ್ದಾರೆ.

Comments are closed.