Rajastan : ಹಿಂದೂ ಹುಡುಗಿಯರನ್ನು ಬಲೆಗೆ ಸಿಲುಕಿಸಿ ಲೈಂಗಿಕ ಶೋಷಣೆ – ಮುಸ್ಲಿಂ ಯುವಕರ ಗ್ಯಾಂಗ್‌ ಅರೆಸ್ಟ್ !!

Share the Article

Rajastan : ರಾಜಸ್ಥಾನದಲ್ಲಿ ಮುಸಲ್ಮಾನ ಯುವಕರು ಅಪ್ರಾಪ್ತ ಹಿಂದೂ ಹುಡುಗಿಯರನ್ನು ಬಲೆಗೆ ಸಿಲುಕಿಸಿ ಅವರಿಗೆ ಲೈಂಗಿಕ ಶೋಷಣೆ ಮಾಡುವುದರ ಜೊತೆಗೆ ಮತಾಂತರ ಮಾಡುವ ಪ್ರಯತ್ನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಸದ್ಯ ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ.

ಪೊಲೀಸರು ಏಳು ಜನ ಆರೋಪಿಗಳನ್ನು ಬಂಧಿಸಿದ್ದು ಇವರಲ್ಲಿ ಇಬ್ಬರು ಅಪ್ರಾಪ್ತರೂ ಕೂಡ ಇದ್ದಾರೆ. ಇದೀಗ ನ್ಯಾಯಾಲಯವು ೫ ಪ್ರೌಢ ಆರೋಪಿಗಳಿಗೆ ೪ ದಿನ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ. ಇಬ್ಬರು ಅಪ್ರಾಪ್ತ ಹುಡುಗರನ್ನು ಬಾಲ ಅಪರಾಧ ಕೇಂದ್ರಕ್ಕೆ ಕಳುಹಿಸಿದ್ದಾರೆ. ಈ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರಪಡಿಸುವಾಗ ನ್ಯಾಯವಾದಿಗಳು ಇವರನ್ನು ಥಳಿಸಿದ್ದಾರೆ. ಅವರ ಮೇಲೆ ಬೂಟು ಮತ್ತು ಚಪ್ಪಲಿ ಎಸೆದಿದ್ದಾರೆ. ಇಲ್ಲಿಯ ಹಿಂದೂ ಜನಾಂಗ ಕೂಡ ಈ ಪ್ರಕರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಇನ್ನು ಈ ಕುರಿತಾಗಿ ಐದು ಅಪ್ರಾಪ್ತ ಹಿಂದೂ ಯುವತಿಯರು ದೂರು ನೀಡಿದ್ದು ಈ ಆರೋಪಿಗಳು ತಮಗೆ ಹೇಗೆಲ್ಲ ಕಾಟ ನೀಡುತ್ತಿದ್ದರು, ತಮ್ಮನ್ನು ಬಲೆಗೆ ಬೆಳಿಸಿಕೊಳ್ಳಲು ಏನೆಲ್ಲ ಪ್ರಯತ್ನ ಮಾಡುತ್ತಿದ್ದರು ಎಂಬುದಾಗಿ ವಿವರವಾಗಿ ವಿವರಿಸಿದ್ದಾರೆ.

Comments are closed.