Milk Price : ನಂದಿನಿ ಹಾಲಿನ ದರ 5 ರೂ.ಏರಿಕೆ?

Milk Price : ರಾಜ್ಯ ಸರ್ಕಾರ ದಿನೇ ದಿನೇ ರಾಜ್ಯದ ಜನತೆಗೆ ಬೆಲೆ ಏರಿಕೆಯ ಹೊರೆಯನ್ನು ಹೊರಿಸುತ್ತಿದೆ. ಇತ್ತೀಚಿಗಷ್ಟೇ ಬಸ್ ಟಿಕೆಟ್ ದರ, ಮೆಟ್ರೋ ಪ್ರಯಾಣ ದರವನ್ನು ಏರಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಈಗ ಈ ಬೆನ್ನಲ್ಲೇ ನಂದಿನಿ ಹಾಲಿನ ದರವನ್ನು ಏರಿಕೆ ಮಾಡಲು ಚಿಂತನೆ ನಡೆಸಿದೆ ಎಂಬ ಸುದ್ದಿ ಬಂದಿದೆ.
ಹೌದು, ರಾಜ್ಯ ಸರ್ಕಾರವು ರಾಜ್ಯ ಬಜೆಟ್ ನಂತರ ಮತ್ತೆ ಪ್ರತಿ ಲೀಟರ್ ಹಾಲಿನ ದರವನ್ನು 5 ರೂಗೆ ಹೆಚ್ಚಿಸಲು ಕೆಎಂಎಫ್ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಅಂದಹಾಗೆ ಹಾಲಿನ ದರವನ್ನು ಅಗಸ್ಟ್ 2023ರಲ್ಲಿ 2 ರು. ಹೆಚ್ಚಿಸಿ, ಲೀಟರ್ಗೆ 43 ರು.ಗೆ ಹೆಚ್ಚಿಸಲಾಯಿತು. ಜೂನ್ 2024ರಲ್ಲಿ ಪ್ರತಿ ಪ್ಯಾಕೇಟ್‌ಗೆ 50 ಮಿಲಿ ಲೀ. ಹಾಲು ಹೆಚ್ಚುವರಿಯಾಗಿ ಕೊಟ್ಟು ಮತ್ತೆ 2ರು.ಹೆಚ್ಚಿಸಿತ್ತು. ಇದೀಗ ರಾಜ್ಯದ 16 ಹಾಲು ಒಕ್ಕೂಟಗಳಿಂದ ದರವನ್ನು ಪ್ರತಿ ಲೀಟರ್ ಗೆ 5 ರೂ. ಏರಿಕೆ ಮಾಡಲು ಒತ್ತಡವಿದೆ. ಹೀಗಾಗಿ ದರ ಏರಿಸುವಂತೆ ಕೆಎಂಎಫ್ ಸರ್ಕಾರಕ್ಕೆ ಕಳೆದ ವರ್ಷವೇ ಪ್ರಸ್ತಾವನೆ ಸಲ್ಲಿಸಿದೆ ಎನ್ನಲಾಗಿದೆ.
ರೈತರು ಜಾನುವಾರುಗಳಿಗೆ ನೀಡುತ್ತಿರುವ ವಸ್ತುಗಳ ದರ ಹೆಚ್ಚಾಗಿದ್ದು, ಈ ಹಿನ್ನೆಲೆ ಹಾಲಿನ ದರ 5 ರೂ ಏರಿಕೆ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದು, ಈ ಮೂಲಕ ಸರ್ಕಾರ ಎಷ್ಟು ದರ ಹೆಚ್ಚಿಸುತ್ತೆ ಎಂಬುದರ ಮೇಲೆ ನಿರ್ಧಾರಿಸಲಾಗುತ್ತೆ ಎಂದು ಕೆಎಂಎಫ್ ಮೂಲಗಳು ತಿಳಿಸಿವೆ.
Comments are closed.