Coconut: ತೆಂಗು ಬೆಲೆಯಲ್ಲಿ ಭಾರಿ ಏರಿಕೆ – ಕೆಜಿ ಗೆ 70 ರೂ !!

Share the Article

Coconut: ಸತತ ಬೆಲೆ ಕುಸಿತದಿಂದ ಕಂಗೆಟ್ಟಿದ್ದ ತೆಂಗಿನ ಬೆಳೆಗಾರರು ಇದೀಗ ನಿಟ್ಟುಸಿರು ಬಿಡುವಂತಾಗಿದೆ. ಯಾಕೆಂದರೆ ದಿನನಿತ್ಯವೂ ತೆಂಗಿನ ಬೆಲೆಯಲ್ಲಿ ಏರಿಕೆ ಕಾಣುತ್ತಿದ್ದು ಇದೀಗ ತೆಂಗಿನಕಾಯಿ ಕೆಜಿಗೆ 70 ರೂ ಗಡಿ ದಾಟಿದೆ.

 

ಹೌದು, ತೆಂಗಿನಕಾಯಿ ಬೆಲೆ ಇದೀಗ ಮಾರುಕಟ್ಟೆಯಲ್ಲಿ ದಾಖಲೆಯತ್ತ ಮುನ್ನುಗ್ಗುತ್ತಿದೆ. ಮದುವೆ ಸೀಜನ್ ಮೊದಲೇ ತೆಂಗಿನಕಾಯಿ ಹಾಗೂ ಕೊಬ್ಬರಿಗೆ ಬಂಪರ್ ಬೆಲೆ ಬಂದಿದ್ದು, ತೆಂಗು ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

 

ಕ್ವಿಂಟಲ್‌ಗೆ ಸಗಟು ಬೆಲೆ 65000-70000 ರು. ಗೆ ಮಾರಾಟವಾಗುತ್ತಿದೆ. ಇದರಲ್ಲಿ ವಿಂಗಡಿಸಿದ ದಪ್ಪ ಗಾತ್ರದ ಒಂದು ಕಾಯಿಗೆ 65 ರು. ಮಧ್ಯಮ ದಪ್ಪ 45 ರು. ಹಾಗೂ ಸಣ್ಣ ಕಾಯಿ 30 ರೂ.ಗೆ ಮಾರಾಟವಾಗುತ್ತಿದೆ. ಇದು ಸಗಟು ಬೆಲೆಯಾಗಿದ್ದು, ಚಿಲ್ಲರೆ ಅಂಗಡಿಗಳಲ್ಲಿ ದಪ್ಪ 70 ರು. ಮಧ್ಯಮ 50 ರು. ಮತ್ತು ಸಣ್ಣ ತೆಂಗಿನಕಾಯಿಗಳು ರು.35ಕ್ಕೆ ಮಾರಾಟವಾಗುತ್ತಿದೆ. ಒಟ್ಟಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ತೆಂಗಿನಕಾಯಿ ದರ ಮೂರು ಪಟ್ಟು ಏರಿಕೆಯಾಗಿದೆ.

Comments are closed.