Prayagraj Mahakumbh 2025: ರಸ್ತೆ, ರೈಲ್ವೇ ಅಲ್ಲ ಕುಂಭಮೇಳಕ್ಕೆ ದೋಣಿಯಲ್ಲಿ ಬಂದ ಯುವಕರು;
84 ಗಂಟೆಗಳಲ್ಲಿ 550 ಕಿಮೀ ಮಹಾ ಕುಂಭ ಯಾತ್ರೆ

Mahakumbh Mela: ಮಹಾರಾಷ್ಟ್ರದ ಯುವಕನೋರ್ವ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರ ತಲುಪಲು ಸಾಧ್ಯವಾಗಿಲ್ಲ ಅಂತ ಪ್ಯಾರಾಗ್ಲೈಡ್‌ನಲ್ಲಿ ಹಾರಿಕೊಂಡು ಬಂದರೆ, ಇತ್ತ ಬಿಹಾರದ ಏಳು ಮಂದಿ ಯುವಕರು ಮಹಾಕುಂಭ ಮೇಳಕ್ಕೆ ತೆರಳಲು ದೋಣಿಯಲ್ಲಿ ತೇಲಿ ಹೋಗಿದ್ದಾರೆ.
Pune: ಪರೀಕ್ಷೆಗೆ ತಡವಾಗಿದ್ದಕ್ಕೆ ಪ್ಯಾರಾಗ್ಲೈಡ್‌ನಲ್ಲಿ ಬಂದಿಳಿದ ವಿದ್ಯಾರ್ಥಿ!
ಹೌದು, ಮಹಾ ಕುಂಭಮೇಳದಲ್ಲಿ ಭಾಗಿಯಾಗಲು ಇಚ್ಛೆ ವ್ಯಕ್ತಪಡಿಸಿದ ಬಿಹಾರದ 7 ಯುವಕರು, ರೈಲಿನಲ್ಲಿ ಜಾಗವಿಲ್ಲ, ವಿಮಾನದಲ್ಲಿ ಹೋಗಲು ಹಣವಿಲ್ಲ ಎಂಬ ಕಾರಣಕ್ಕೆ ದೋಣಿಯಲ್ಲಿಯೇ 84 ಗಂಟೆಗಳ ಕಾಲ 550 ಕಿ.ಮೀ. ಪಯಣಿಸಿ ಉತ್ತರ ಪ್ರದೇಶದ ಪ್ರಯಾಗ್‌ರಾಜ್ ತಲುಪಿದ್ದಾರೆ. ಪ್ರಯಾಣದ ಮಾರ್ಗವನ್ನು ತಿಳಿಯಲು ಇವರು ಗೂಗಲ್ ನಕ್ಷೆ ಬಳಸಿಕೊಂಡಿದ್ದಾರೆ.
जाम से बचने का ये भी एक उपाय है…
बक्सर, बिहार से महाकुंभ, प्रयागराज जल मार्ग से… pic.twitter.com/9iGejw5Fxt— Arvind Mohan Singh (@ArvindSinghUp) February 14, 2025
ಈ ಭಕ್ತರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ, ಅವರು ಸ್ವಯಂಚಾಲಿತ ಮೋಟಾರ್ ಬೋಟ್‌ನಲ್ಲಿ ಗಂಗಾ ನದಿಯ ಮೂಲಕ ಪ್ರಯಾಗರಾಜ್‌ಗೆ ಪ್ರಯಾಣಿಸುತ್ತಿರುವುದನ್ನು ಕಾಣಬಹುದು. ಈ ಕುರಿತು ಪತ್ರಕರ್ತರು ಭಕ್ತರನ್ನು ಪ್ರಶ್ನಿಸಿದಾಗ, ರಸ್ತೆಯಲ್ಲಿನ ಜಾಮ್ ಮತ್ತು ರೈಲಿನಲ್ಲಿ ಆಸನಗಳ ಕೊರತೆಯಿಂದಾಗಿ ಯಾವುದೇ ರೀತಿಯಲ್ಲಿ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು. ನಂತರ ಮೋಟಾರು ದೋಣಿಯ ಸಹಾಯ ಪಡೆದು ಗಂಗಾ ನದಿಯ ಮೂಲಕ ಸುಮಾರು 550 ಕಿ.ಮೀ. ಪ್ರಯಾಣ ಮಾಡಿದೆವು ಎಂದು ಅವರು ಹೇಳಿದರು.
ಬಿಹಾರದ 7 ಭಕ್ತರ ಈ ಪ್ರಯತ್ನ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅವರ ‘ಬಿಹಾರಿ ಜುಗಾದ್’ಗೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮುನ್ನು, ಸುಮನ್ ಚೌಧರಿ, ಸಂದೀಪ್, ಸುಖದೇವ್ ಚೌಧರಿ, ಆಡು ಚೌಧರಿ, ರವೀಂದ್ರ ಮತ್ತು ರಮೇಶ್ ಚೌಧರಿ ಸೇರಿದಂತೆ ಏಳು ಮಂದಿ ಭಕ್ತರ ಗುಂಪು ಈ ಸಾಹಸಕ್ಕೆ ಇಳಿದು ಕುಂಭಮೇಳಕ್ಕೆ ಬಂದಿದ್ದಾರೆ.
144 ವರ್ಷಗಳ ನಂತರ ಪ್ರಯಾಗರಾಜ್‌ನಲ್ಲಿ ಮಹಾಕುಂಭ ಆಯೋಜಿಸಲಾಗುತ್ತಿದೆ. ಈ 45 ದಿನಗಳ ಕುಂಭಮೇಳವನ್ನು ಮಕರ ಸಂಕ್ರಾಂತಿಯಂದು ಪ್ರಾರಂಭಿಸಲಾಯಿತು, ಇದು ಮಹಾಶಿವರಾತ್ರಿ ಹಬ್ಬದವರೆಗೆ ಮುಂದುವರಿಯುತ್ತದೆ. ಇಲ್ಲಿಯವರೆಗೆ 52 ಕೋಟಿಗೂ ಹೆಚ್ಚು ಭಕ್ತರು ಸ್ನಾನ ಮಾಡಲು ಆಗಮಿಸಿದ್ದಾರೆ.
Comments are closed.