Goa: ಐರಿಷ್-ಬ್ರಿಟಿಷ್ ಪ್ರವಾಸಿ ಯುವತಿಯ ರೇಪ್& ಮರ್ಡರ್ ಕೇಸ್- ಅಪರಾಧಿಗೆ ಶಿಕ್ಷೆ

Irish Tourist Goa Murder Case: ಐರಿಷ್-ಬ್ರಿಟಿಷ್ ಪ್ರವಾಸಿ ಯುವತಿಯನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ 31 ವರ್ಷದ ವಿಕಾಸ್ ಭಗತ್‌ಗೆ 8 ವರ್ಷಗಳ ಬಳಿಕ ಗೋವಾ ಕೋರ್ಟ್ ಕಠಿಣ ಶಿಕ್ಷೆಯನ್ನು ವಿಧಿಸಿದೆ. ಅಪರಾಧಿ ವಿಕಾಸ್ ಭಗತ್ 2017 ರಲ್ಲಿ ಎಸಗಿದ ಕೃತ್ಯಕ್ಕೆ ಕೋರ್ಟ್ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಅಂತಿಮ ತೀರ್ಪನ್ನು ಪ್ರಕಟ ಮಾಡಿದೆ.
2017 ರ ಮಾರ್ಚ್ ತಿಂಗಳಲ್ಲಿ 28 ವರ್ಷ ವಯಸ್ಸಿನ ಐರಿಷ್-ಬ್ರಿಟಿಷ್ ಯುವತಿ ಗೋವಾ ಪ್ರವಾಸಕ್ಕೆಂದು ಬಂದಿದ್ದು, ಮಾ.14 ರಂದು ದಕ್ಷಿಣ ಗೋವಾದ ಕ್ಯಾನಕೋನಾ ಗ್ರಾಮದ ಅರಣ್ಯ ಪ್ರದೇಶದಲ್ಲಿ ಯುವತಿಯ ಶವ ಅತ್ಯಾಚಾರ ಮಾಡಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಕುರಿತಂತೆ ನ್ಯಾಯಾಲಯವು ಶುಕ್ರವಾರ ವಿಕಾಸ್ ಭಗತ್ (31) ಅಪರಾಧಿ ಎಂದು ಘೋಷಣೆ ಮಾಡಿದ್ದು, ಸೋಮವಾರ (ಫೆ.17) ಶಿಕ್ಷೆ ಪ್ರಕಟ ಮಾಡಿದೆ.
ಸಂತ್ರಸ್ತೆಯ ಕುಟುಂಬದವರು ಶುಕ್ರವಾರ ಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದರು. ಡೇನಿಯಲ್ (ಸಂತ್ರಸ್ತೆಯ ಹೆಸರು ಬದಲಾಯಿಸಲಾಗಿದೆ) ನಮ್ಮ ಮಗಳಿದ್ದಂತೆ, ಆಕೆಯ ಪರ ನ್ಯಾಯಕ್ಕಾಗಿ ಹೋರಾಡಿದ ಎಲ್ಲರಿಗೂ ಧನ್ಯವಾದಗಳು, ನಾವು ಕೃತಜ್ಞರಾಗಿರುತ್ತೇವೆ ಎಂದು ಭಾವುಕರಾಗಿ ಹೇಳಿದ್ದಾರೆ.
ಪ್ರಕರಣ ವಿವರ:
ಮಾರ್ಚ್ 2017 ರಲ್ಲಿ ದಕ್ಷಿಣ ಗೋವಾದ ಅರಣ್ಯ ಪ್ರದೇಶದಲ್ಲಿ 28 ವರ್ಷದ ಸಂತ್ರಸ್ತೆಯ ಮೃತದೇಹವೊಂದು ಪತ್ತೆಯಾಗಿತ್ತು. ದೇಹದ ಮೇಲೆ ಒಂದೇ ಒಂದು ತುಂಡು ಬಟ್ಟೆ ಇಲ್ಲದೆ, ರಕ್ತದ ಮಡುವಿನಲ್ಲಿ ಶವ ಪತ್ತೆಯಾಗಿತ್ತು. ತಲೆ ಮತ್ತು ಮುಖದ ಭಾಗದಲ್ಲಿ ಗಾಯವಾಗಿತ್ತು. ಆರೋಪಿಯನ್ನು ಪೊಲೀಸರು ಬಂಧನ ಮಾಡಿ ತನಿಖೆ ಮಾಡಿದ್ದರು. ಯುವತಿಯ ಮೇಲೆ ಅತ್ಯಾಚಾರ ಎಸಗಿರುವುದನ್ನು ಫೋರೆನ್ಸಿಕ್ ವರದಿಗಳು ದೃಢಪಡಿಸಿದೆ. ಅತ್ಯಾಚಾರ ಮಾಡಿದ ಬಳಿಕ ಆಕೆಯ ಮುಖವನ್ನು ಬಿಯರ್ ಬಾಟಲಿಯಿಂದ ಜಜ್ಜಲಾಗಿದೆ. ಈ ಕೃತ್ಯಕ್ಕೆ ಯಾವುದೇ ಕಾರಣಕ್ಕೆ ಕ್ಷಮೆ ನೀಡದಂತೆ ಮನವಿ ಮಾಡಲಾಗಿತ್ತು.
Comments are closed.