Fastag Rules: ಫೆ.17 ರಿಂದ ಫಾಸ್ಟ್‌ಟ್ಯಾಗ್ ಹೊಸ ನಿಯಮ ಜಾರಿ! ತಪ್ಪಿದ್ರೆ ಬ್ಲ್ಯಾಕ್ ಲಿಸ್ಟ್ ಗ್ಯಾರಂಟಿ

Fastag Rules: ಫಾಸ್ಟ್‌ಟ್ಯಾಗ್ ಸೇವೆಗೆ ಹೊಸ ನಿಯಮಗಳು ಫೆ. 17 ರಿಂದ ಜಾರಿಗೆ ಬಂದಿದೆ. ಟೋಲ್ ಪ್ಲಾಜಾಗಳಲ್ಲಿ ವಾಹನ ದೀರ್ಘ ಸರತಿಯನ್ನು ತಪ್ಪಿಸುವ ಮತ್ತು ಸುಗಮ ಸಂಚಾರವನ್ನು ಖಚಿತಪಡಿಸುವ ಉದ್ದೇಶದಿಂದ ಈ ಮಾರ್ಗಸೂಚಿಗಳನ್ನು ಅಳವಡಿಸಲಾಗಿದೆ.

ಹೊಸ ನಿಯಮಗಳ ಪ್ರಕಾರ, ಫಾಸ್ಟ್‌ಟ್ಯಾಗ್ (Fastag Rules) ಬಳಕೆದಾರರು ತಮ್ಮ ಖಾತೆಯಲ್ಲಿಯೇ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬೇಕು. ಇಲ್ಲವಾದರೆ, ಕಪ್ಪುಪಟ್ಟಿಗೆ (Blacklist) ಸೇರಿಸಲಾಗುವುದು ಮತ್ತು ಹೆಚ್ಚುವರಿ ದಂಡ ವಿಧಿಸಲಾಗುತ್ತದೆ.

ಫಾಸ್ಟ್‌ಟ್ಯಾಗ್ ಹೊಸ ನಿಯಮಗಳ ಪ್ರಮುಖ ಅಂಶಗಳು:

ಟೋಲ್ ದಾಟುವ ಕನಿಷ್ಠ ಒಂದು ಗಂಟೆ ಮುಂಚಿತವಾಗಿ ಹಣ ಜಮೆ ಮಾಡಿರಬೇಕು. ಟೋಲ್ ಹತ್ತಿರ ಬಂದ ನಂತರ ರಿಚಾರ್ಜ್ ಮಾಡುವ ವ್ಯವಸ್ಥೆ ಕಾರ್ಯನಿರ್ವಹಿಸುವುದಿಲ್ಲ.

ಕೆವೈಸಿ (KYC) ಅಪ್‌ಡೇಟ್ ಮಾಡದೇ ಇದ್ದರೆ ನಿಮ್ಮ ಟ್ಯಾಗ್ ಅನ್ನು ‘ಬ್ಲಾಕ್’ ಮಾಡಲಾಗುತ್ತದೆ. ಇದರೊಂದಿಗೆ ಪ್ರಯಾಣಿಸುವ ವಾಹನಗಳಿಗೆ ದುಪ್ಪಟ್ಟು ಟೋಲ್ ಪಾವತಿಸಬೇಕಾಗುತ್ತದೆ.

ಟೋಲ್ ದಾಟುವ 60 ನಿಮಿಷಗಳ ಮೊದಲು ಮತ್ತು ದಾಟಿದ 10 ನಿಮಿಷಗಳವರೆಗೆ ಫಾಸ್ಟ್‌ಟ್ಯಾಗ್ ಸಕ್ರಿಯವಾಗಿರಬೇಕು. ಈ ಅವಧಿಯಲ್ಲಿ ಟ್ಯಾಗ್ ನಿಷ್ಕ್ರಿಯವಾಗಿದ್ದರೆ, ಪ್ರಯಾಣಿಕರು ಎರಡು ಪಟ್ಟು ಹಣ ಪಾವತಿಸಬೇಕಾಗುತ್ತದೆ.

ಟೋಲ್ ದಾಟಿದ 15 ನಿಮಿಷಗಳ ನಂತರ ಹಣ ಕಡಿತವಾದರೆ, ಪ್ರಯಾಣಿಕರು ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ.

ಟೋಲ್ ಪಾವತಿ ವಿಳಂಬವಾದರೆ, ಇದರ ಹೊಣೆಯನ್ನು ಟೋಲ್ ಆಪರೇಟರ್ ಹೊರುತ್ತಾನೆ. ಆದರೆ, ಬಳಕೆದಾರರು 15 ದಿನಗಳ ಒಳಗಾಗಿ ದೂರು ಸಲ್ಲಿಸಬೇಕು.

ಟೋಲ್ ಸಿಸ್ಟಮ್‌ನಲ್ಲಿ ‘Error Code 176’ ತೋರಿಸಿದರೆ, ಟೋಲ್ ಪಾವತಿ ನಿಯಮ ಉಲ್ಲಂಘನೆ ಆಗಿರುವ ಸಂಕೇತವಾಗಿದೆ. ಈ ವೇಳೆ ದುಪ್ಪಟ್ಟು ಹಣ ಪಾವತಿಸಬೇಕಾಗುತ್ತದೆ.

 

Comments are closed.