Belthangady: ಕಕ್ಕಿಂಜೆ ಶಾಲಾ ಮಕ್ಕಳಿಗೆ ದಿಢೀರ್ ಹೆಜ್ಜೇನು ದಾಳಿ

Belthangady: ಕಕ್ಕಿಂಜೆ ಅಣಿಯೂರು ಸ.ಹಿ.ಪ್ರಾಥಮಿಕ ಶಾಲೆಯ ಮಕ್ಕಳಿಗೆ ಹೆಜ್ಜೇನು ದಾಳಿ ಮಾಡಿದ ಘಟನೆಯೊಂದು ಇಂದು (ಫೆ.18) ರಂದು ನಡೆದಿದೆ. ಈ ಘಟನೆಯಲ್ಲಿ 15 ಮಕ್ಕಳಿಗೆ ಹೆಜ್ಜೇನು ದಾಳಿ ಮಾಡಿದೆ.
ಫೆ.17 ರಂದು ಹೆಜ್ಜೇನು ಕಾಣಿಸಿಕೊಂಡಿದ್ದು, ನಿನ್ನೆ ಕೂಡಾ ಶಾಲಾ ಮಕ್ಕಳಿಗೆ ರಜೆಯನ್ನು ಘೋಷಣೆ ಮಾಡಿದ್ದರು. ಇಂದು ಬೆಳಗ್ಗಿನ ಜಾವಾ ಶಾಲಾ ಸಮಯದಲ್ಲಿ 15 ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ಏಕಾಏಕಿ ದಾಳಿ ಮಾಡಿದ್ದು, ಗಾಯಗೊಂಡ ಶಾಲಾ ವಿದ್ಯಾರ್ಥಿಗಳನ್ನು ಕಕ್ಕಿಂಜೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅರಣ್ಯ ಇಲಾಖೆಯ ಸಿಬ್ಬಂದಿಗಳು ಶಾಲೆಗೆ ಭೇಟಿ ನೀಡಿದ್ದು, ಇಂದು (ಫೆ.18) ಶಾಲೆಗೆ ರಜೆಯನ್ನು ಘೋಷಣೆ ಮಾಡಿದ್ದಾರೆ.
Comments are closed.