Mandya: ಕಳ್ಳ ಪೊಲೀಸ್ ಆಟದಲ್ಲಿ 3 ವರ್ಷದ ಬಾಲಕ ಸಾವು! ನಕಲಿಯೆಂದು ಅಸಲಿ ಗನ್ ಶೂಟ್ ಮಾಡಿದ ಅಣ್ಣ!

Mandya: ಕಳ್ಳ ಪೊಲೀಸ್ ಆಟದಲ್ಲಿ 3 ವರ್ಷದ ಬಾಲಕ ಸಾವಿನ ಮನೆ ಸೇರಿದ್ದಾನೆ. ಮಂಡ್ಯದ (Mandya) ನಾಗಮಂಗಲ ತಾಲೂಕಿನಲ್ಲಿ ಗುಂಡು ತಗುಲಿ ತೀವ್ರ ರಕ್ತಸ್ರಾವವಾಗಿ ಬಾಲಕ ಮೃತಪಟ್ಟಿದ್ದಾನೆ.
ನಾಗಮಂಗಲದ ದೊಂದೇಮಾದಿಹಳ್ಳಿಯಲ್ಲಿ ಕಾಂಗ್ರೆಸ್ ಮುಖಂಡ ನರಸಿಂಹಮೂರ್ತಿ ಎಂಬವರಿಗೆ ಸೇರಿದ ಕೋಳಿ ಫಾರಂನಲ್ಲಿ ಭದ್ರತೆಗಾಗಿ ಒಂದು ಅಸಲಿ ಕೋವಿ (ಗನ್) ಇಡಲಾಗಿತ್ತು. ಆದರೆ ಅದು ಸಜೀವ ಗುಂಡುಗಳಿಂದ ಲೋಡೆಡ್ ಆಗಿತ್ತು. ಈ ಗನ್ ನಲ್ಲಿ ಫೆ. 17 ರಂದು ಅಣ್ಣ ತಮ್ಮಂದಿರು ಕಳ್ಳ- ಪೊಲೀಸ್ ಆಟ ಆಡುತ್ತಿದ್ದಾಗ ಬಾಲಕ ತಿಳಿಯದೆ ಅಸಲಿ ಗನ್‌ನಿಂದಲೇ ತನ್ನ ತಮ್ಮನ ಹೊಟ್ಟೆಗೆ ಶೂಟ್ ಮಾಡಿದ್ದು, ತೀವ್ರ ರಕ್ತ ಸ್ರಾವದಿಂದ ಬಾಲಕ ಮೃತ ಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
Comments are closed.