Putturu : ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಕಾಮಗಾರಿ ವೇಳೆ ವಿವಿಧ ದುರ್ಘಟನೆ – ತಾಂಬೂಲ ಪ್ರಶ್ನೆಯಲ್ಲಿ ತಿಳಿದು ಬಂದದ್ದೇನು?

Putturu : ದಕ್ಷಿಣಕನ್ನಡ ಜಿಲ್ಲೆಯಲ್ಲಿನ ಪ್ರಮುಖ ಧಾರ್ಮಿಕ ಕ್ಷೇತ್ರಗಳ ಪೈಕಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನವು ಒಂದು. ಇದೀಗ ಈ ದೇವಳದ ಆವರಣದಲ್ಲಿ ವಿವಿಧ ಕಾಮಗಾರಿಗಳ ಪ್ರಕ್ರಿಯೆ ನಡೆಯುತ್ತಿದೆ. ದೇವಳದ ಅಭಿವೃದ್ಧಿಗಾಗಿ ಕರೆಸೇವಿಯು ಕೂಡ ನಡೆಯುತ್ತಿದೆ. ಆದರೆ ಈ ಎಲ್ಲಾ ಕಾರ್ಯಗಳು ಆರಂಭವಾದಾಗಿನಿಂದಲೂ ಒಂದಲ್ಲ ಒಂದು ಎಡವಟ್ಟುಗಳು, ತೊಂದರೆಗಳು, ಅಡಚಡಣೆಗಳು ಎದುರಾಗುತ್ತಿವೆ.

 

ಹೌದು, ದೇವಾಲಯದ ಕಾಮಗಾರಿ ಪ್ರಕ್ರಿಯೆಗಳು ಆರಂಭವಾದಾಗಿನಿಂದ ದೇವಾಲಯದ ಜಾಗದಲ್ಲಿದ್ದ ಕುಟುಂಬಗಳ ಮನೆ ತೆರವು ಪ್ರಕ್ರಿಯೆಯಿಂದ ಹಿಡಿದು ಕರಸೇವೆ ಮಾಡುವವರಿಗೆ ಕೆಲವು ಆಘಾತಕಾರಿ ಘಟನೆಗಳು ಎದುರಾಗಿದೆ. ಅಲ್ಲದೆ ದೇವಸ್ಥಾನದ ಆವರಣದಲ್ಲಿರುವ ತೆಂಗಿನ ಮರಗಳನ್ನು ಕಡಿಯುವ ಸಂದರ್ಭದಲ್ಲಿ ಮರದ ತುಂಡೊಂದು ಕ್ಷೇತ್ರದ ನಿತ್ಯ ಕಾರ್ಮಿಕನೋರ್ವನ ಮೇಲೆ ಬಿದ್ದಿದೆ. ಗಂಭೀರವಾಗಿ ಗಾಯಗೊಂಡ ಕಾರ್ಮಿಕನನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದೇವಸ್ಥಾನದ ಅಭಿವೃದ್ಧಿ ವಿಚಾರದಲ್ಲಿ ತಾಂಬೂಲ‌ ಪ್ರಶ್ನೆ ನಡೆದ ಮರುದಿನವೇ ಈ ಘಟನೆ ನಡೆದಿರೋದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೂ ಗ್ರಾಸವಾಗಿದೆ.

 

ತಾಂಬೂಲ ಪ್ರಶ್ನೆಯಲ್ಲಿ ತಿಳಿದು ಬಂದದ್ದೇನು? 

ಅಭಿವೃದ್ಧಿ ವಿಚಾರದಲ್ಲಿ ದೇವರಿಗೆ ತೃಪ್ತಿಯಿದೆಯೋ ಎಂದು ಕೇಳುವ ಹಿನ್ನಲೆಯಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನೇತೃತ್ವದಲ್ಲಿ ಫೆ. 16 ರಂದು ತಾಂಬೂಲ‌ ಪ್ರಶ್ನೆಯನ್ನೂ ನೆರವೇರಿಸಲಾಗಿತ್ತು. ತಾಂಬೂಲ ಪ್ರಶ್ನೆಯಲ್ಲಿ ಕೆಲವು ವಿಚಾರಗಳ ಬಗ್ಗೆ ದೋಷವೂ ಕಂಡಯ ಬಂದಿದೆ. ದೇವಸ್ಥಾನದ ಆವರಣದಲ್ಲಿದ್ದ ಮನೆಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ಮನೆ‌ ಮಂದಿಗೆ ಪರಿಹಾರ ನೀಡಿರೋದು ಸರಿಯಾದ ಕ್ರಮವಲ್ಲ ಎಂದು ತಾಂಬೂಲ‌ ಪ್ರಶ್ನೆ ಇಟ್ಟ ದೈವಜ್ಞರು ತಿಳಿಸಿದ್ದಾರೆ. ಅಲ್ಲದೆ ದೇವಸ್ಥಾನದ ಪರಿಸರದಲ್ಲಿ ಸ್ತ್ರೀ ಹತ್ಯಾ ದೋಷವೂ ಕಂಡು ಬಂದಿದ್ದು, ಈ ಎಲ್ಲಾ ದೋಷಗಳಿಗೆ ಪರಿಹಾರ ಕಂಡುಕೊಳ್ಳವಂತೆಯೂ ಸೂಚಿಸಲಾಗಿತ್ತು.

 

ಅಲ್ಲದೆ ದೇವಸ್ಥಾನದ ಜಾಗವನ್ನು ಬಿಟ್ಟುಕೊಡಲು ನಿರಾಕರಿಸಿದ ಕುಟುಂಬಗಳ ಕಣ್ಣಿಗೆ ತೊಂದರೆಯಾಗಲಿದೆ ಎನ್ನುವ ವಿಚಾರವೂ ತಾಂಬೂಲ ಪ್ರಶ್ನೆಯಲ್ಲಿ ಕಂಡು ಬಂದಿತ್ತು. ಪ್ರಶ್ನೆ ನಡೆದ ಮರುದಿನವೇ ದೇವಸ್ಥಾನದ ಆವರಣದಲ್ಲಿದ್ದ ತಂಗಿನ ಮರದ ತೆರವು ವೇಳೆ ತೆಂಗಿನ ಮರ ಕಾರ್ಮಿಕನ ಮೇಲೆ ಬಿದ್ದ ಪರಿಣಾಮ ಪರಿಣಾಮ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾನೆ. ದೇವಸ್ಥಾನದ ಆವರಣದಲ್ಲೇ ನಡೆದ ಈ ಘಟನೆ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೂ ಕಾರಣವಾಗಿದೆ.

 

ಇನ್ನು ದೇವಸ್ಥಾನದ ಆವರಣದಲ್ಲಿದ್ದ ಮನೆಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಡೆದುಕೊಂಡ ಕ್ರಮದ ಬಗ್ಗೆಯೂ ಗೊಂದಲ ಏರ್ಪಟ್ಟಿತ್ತು. ಸಮಿತಿಯ ಕ್ರಮದ ಬಗ್ಗೆ ಪರ ಮತ್ತು ವಿರೋಧಾಭಿಪ್ರಾಯಗಳೂ ಮೂಡಿದ್ದವು. ಇದೀಗ ಕಾರ್ಮಿಕ ಗಂಭೀರವಾಗಿ ಗಾಯಗೊಂಡ ಘಟನೆ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೂ ಗ್ರಾಸವಾಗಿದೆ ಎನ್ನಲಾಗಿದೆ.

Comments are closed.