HIV Injection: ವರದಕ್ಷಿಣೆ ಪಿಡುಗು, ಸೊಸೆಗೆ ಎಚ್‌ಐವಿ ಸೋಂಕಿತ ಸೂಜಿ ಚುಚ್ಚಿದ ಅತ್ತೆ-ಮಾವ;

Share the Article

HIV Injection: ವರದಕ್ಷಿಣೆ ಕೊಟ್ಟಿಲ್ಲ ಎಂದು ಅತ್ತೆ-ಮಾವ ಸೊಸೆಗೆ ಎಚ್‌ಐವಿ ಸೋಂಕಿತ ಸೂಜಿ ಚುಚ್ಚಿದ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ. ವರದಕ್ಷಿಣೆಯಾಗಿ 10 ಲಕ್ಷ ರೂ. ಹಾಗೂ ಎಸ್‌ಯುವಿ ಕಾರು ಕೊಟ್ಟಿಲ್ಲವೆಂದು 30 ವರ್ಷದ ಮಹಿಳೆಗೆ ಹೆಚ್‌ಐವಿ ಸೂಜಿ ಚುಚ್ಚಲಾಗಿದೆ. ಸಹರಾನ್‌ಪುರ ನ್ಯಾಯಾಲಯವು ಈ ಘಟನೆ ಕುರಿತು ದೂರು ದಾಖಲು ಮಾಡುವಂತೆ ಉತ್ತರ ಪ್ರದೇಶದ ಪೊಲೀಸರಿಗೆ ಆದೇಶ ನೀಡಿದೆ.

ಮಹಿಳೆ ಸಹರಾನ್‌ಪುರ ನಿವಾಸಿಯಾಗಿದ್ದು, ಆಕೆಯ ಪತಿ, ಅತ್ತೆ ಸೇರಿ ಒಟ್ಟು ನಾಲ್ಕು ಜನರ ವಿರುದ್ಧ ಐಪಿಸಿ 307, 498ಎ, 323, 328, 406 ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಮೇ.2024 ರಲ್ಲಿ ಹರಿದ್ವಾರದಲ್ಲಿರುವ ಅತ್ತೆಯ ಮನೆಯಲ್ಲಿ ಈ ಘಟನೆ ನಡೆದಿದೆ ಎಂಬ ಆರೋಪವಿದೆ.

2023ರಲ್ಲಿ ಸಂತ್ರಸ್ತೆಯ ವಿವಾಹವು ನಡೆದಿದ್ದು, 45 ಲಕ್ಷ ರೂ. ಖರ್ಚು ಮಾಡಿದ್ದು, ವರನ ಕುಟುಂಬಕ್ಕೆ 15 ಲಕ್ಷ ರೂ. ನಗದು ಹಾಗೂ ಸಬ್‌ ಕಾಂಪ್ಯಾಕ್ಟ್‌ ಎಸ್‌ಯುವಿ ನೀಡಲಾಗಿದೆ. ಆದರೆ ಇನ್ನೂ ಹೆಚ್ಚು 10 ಲಕ್ಷ ಹಣ ತರುವಂತೆ ಹಾಗೂ ದೊಡ್ಡ ಎಸ್‌ಯುವಿ ನೀಡುವಂತೆ ಕೇಳಿದ್ದಾರೆ ಎಂದು ಸಂತ್ರಸ್ತೆಯ ತಂದೆ ಹೇಳಿರುವ ಕುರಿತು ವರದಿಯಾಗಿದೆ.

ಮದುವೆಯಾದ ನಂತರ ಆಕೆಗೆ ಅತ್ತೆ-ಮಾವ ಕಿರುಕುಳ ನೀಡಿದ್ದು, ಅವಮನಾ, ಮಗನಿಗೆ ಬೇರೆ ಮಡುವುದಾಗಿ ಬೆದರಿಕೆ, ಮನೆಯಿಂದ ಹೊರಗೆ ಹಾಕಲಾಯಿತು. ಮೂರು ತಿಂಗಳ ಕಾಲ ಈಕೆ ತವರು ಮನೆಯಲ್ಲಿದ್ದು, ನಂತರ ಹೇಗೋ ಮಾತನಾಡಿ ಆಕೆಯನ್ನು ಗಂಡನ ಮನೆಗೆ ಕಳುಹಿಸಲಾಯಿತು. ಅಲ್ಲಿಗೆ ಹೋದ ನಂತರ ಮತ್ತೆ ಅದೇ ರೀತಿಯ ಚಿತ್ರಹಿಂಸೆ ಪುನಃ ನಡೆಯಿತು.

ಆದರೆ 2024 ರಲ್ಲಿ ಮೇ. ನಲ್ಲಿ ಆಕೆಯ ಅತ್ತೆ-ಮಾವ ಬಲವಂತವಾಗಿ ಆಕೆಗೆ ಹೆಚ್‌ಐವಿ ಸೋಂಕಿತ ಸಿರಿಂಜ್‌ ಚುಚ್ಚಿದ್ದು, ಆಕೆಯ ಆರೋಗ್ಯ ತೀವ್ರ ಹದಗೆಟ್ಟಲು ಶುರುವಾಗಿದೆ. ವೈದ್ಯಕೀಯ ಪರೀಕ್ಷೆ ಮಾಡಿದಾಗ ಆಕೆಗೆ ಎಚ್‌ಐವಿ ಪಾಸಿಟಿವ್‌ ಇರುವುದು ತಿಳಿದು ಬಂದಿದೆ. ಆದರೆ ಆಕೆಯ ಪತಿಗೆ ಎಚ್‌ಐವಿ ನೆಗೆಟಿವ್‌ ಬಂದಿದೆ.

Comments are closed.