ಬೇಕರಿಯಲ್ಲಿ ಸ್ವೀಟ್‌ ಪಾರ್ಸ್‌ಲ್‌ ಮಾಡುವಾಗಲೇ ವ್ಯಕ್ತಿಗೆ ಹೃದಯಾಘಾತ, ಕುಸಿದು ಬಿದ್ದು ಸಾವು

Share the Article

Chamarajanagara: ವ್ಯಕ್ತಿಯೊಬ್ಬರು ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲೇ ಹೃದಯಾಘಾತದಿಂದ ಸಾವಿಗೀಡಾದ ಘಟನೆಯೊಂದು ಚಾಮರಾಜನಗರದಲ್ಲಿ ನಡೆದಿದೆ. ಕೇರಳ ಮೂಲದ ವೇಣುಗೋಪಾಲ್‌ (56ವ) ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿ. ಫೆ.12 ರ ಸಂಜೆ 7.30 ರ ಸುಮಾರಿಗೆ ಚಾಮರಾಜನಗರದ ಕೇಕ್‌ ವಲ್ಡ್‌ ಬೇಕರಿಯಲ್ಲಿ ಗ್ರಾಹಕರಿಗೆ ಸ್ವೀಟ್‌ ಪಾರ್ಸಲ್‌ ಮಾಡುವ ವೇಳೆ ಹಠಾತ್‌ ಹೃದಯಾಘಾತ ಉಂಟಾಗಿ, ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಪರಿಶೀಲನೆ ಮಾಡಿ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

Comments are closed.