Haveri: ಅಯ್ಯೋ ಎಂಥಾ ದುರಂತ.. ಸತ್ತು ಬದುಕಿದ್ದ ವ್ಯಕ್ತಿ ಈಗ ಮತ್ತೆ ಸತ್ತ !!

Share the Article

Haveri: ಕೆಲವು ದಿನಗಳ ಹಿಂದಷ್ಟೇ ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ವಿಚಿತ್ರ ಘಟನೆ ಒಂದು ನಡೆದಿತ್ತು. ಸತ್ತ ವ್ಯಕ್ತಿ ಒಬ್ಬ ತಾನು ಇಷ್ಟ ಪಟ್ಟು ಊಟ ಮಾಡುತ್ತಿದ್ದ ಡಾಬಾ ಹತ್ತಿರ ಬಂದಂತೆ ಇದ್ದು ಕುಳಿತಿದ್ದ. ಆದರೆ ಈಗ ಸತ್ತು ಬದುಕಿದ್ದ ಈ ವ್ಯಕ್ತಿ ಇದೀಗ ಮತ್ತೆ ಸತ್ತಿದ್ದಾನೆ.

ಹೌದು, ಶಿಗ್ಗಾಂವಿ (Shiggavi) ತಾಲೂಕಿನ ಬಂಕಾಪುರ (Bankapur) ಗ್ರಾಮದಲ್ಲಿ ಬಿಷ್ಟಪ್ಪ ಗುಡಿಮನಿ (45 ವರ್ಷ) ಎಂಬವರು ಕಳೆದ ಮೂರು-ನಾಲ್ಕು‌ ದಿನಗಳ ಹಿಂದೆ ಬಿಳಿ ಕಾಮಾಲೆ ರೋಗದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಬಿಷ್ಟಪ್ಪ ಗುಡಿಮನಿ ಮೃತಪಟ್ಟಿದ್ದಾರೆ ಶವವನ್ನು ಊರಿಗೆ ತೆಗೆದುಕೊಂಡು ಹೋಗಿ ಎಂದು ಕುಟುಂಬಸ್ಥರಿಗೆ ತಿಳಿಸಿದ್ದರು. ದಾರಿಯಲ್ಲಿ ಬರುವ ವೇಳೆ ಬಿಷ್ಟಪ್ಪ ಅವರಿಗೆ ಇಷ್ಟವಾದ ಡಾಬಾ ಕಂಡಿದೆ. ಆಗ, ಕುಟುಂಬಸ್ಥರು ಡಾಬಾ ಬಂತು ನೋಡು, ಊಟ ಮಾಡುತ್ತೀಯಾ ಎಂದು ಗೋಳಾಡಿ ಕಣ್ಣೀರಿಟ್ಟಾಗ, ಮೃತ ಬಿಷ್ಟಪ್ಪ ಗುಡಿಮನಿ ಉಸಿರಾಡಿದ್ದಾರೆ. ಕುಟುಂಬಸ್ಥರು ಆಗ ಕಂಗಾಲ ಆಗಿದ್ದಾರೆ. ಬಳಿಕ, ಬಿಷ್ಟಪ್ಪ ಗುಡಿಮನಿಗೆ ಶಿಗ್ಗಾಂವಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಸದ್ಯ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದು ದೇವರ ಪವಾಡ ಎಂದು ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದರು.

ಆದರೆ ದುರದೃಷ್ಟವಶಾತ್‌ ಅಶೋಕ್‌ ಗುಡಿಮನಿ ಇಂದು ತೀವ್ರ ಆರೋಗ್ಯ ಸಮಸ್ಯೆಗೆ ತುತ್ತಾಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಬೇಸರ ವಿಚಾರವೆಂದ್ರೆ ಅಶೋಕ್‌ ಸತ್ತ ವಿಚಾರ ತಿಳಿದಾಗಲೇ ಆತ ಸಾವನ್ನಪ್ಪಿದ್ದಾನೆ ಎಂದು ನಿಧನ ಸುದ್ದಿಯ ಬ್ಯಾನರ್ ಸಹ ಹಾಕಿ ಸಂಬಂಧಿಕರಿಗೆಲ್ಲಾ ವಾಟ್ಸಾಪ್‌ ಮೆಸೇಜ್‌ ಕೂಡಾ ಕಳಿಸಲಾಗಿತ್ತು. ನಂತರ ಆತ ಬದುಕಿದ್ದಾನೆ ಎಂದು ಮತ್ತೆ ಎಲ್ಲರಿಗೂ ಸಂದೇಶ ರವಾನಿಸಿ ಸಂತಸ ಪಟ್ಟ ಕುಟುಂಬಕ್ಕೆ ಒಂದು ವಾರ ಕಳೆಯುವಷ್ಟರಲ್ಲೇ ಮತ್ತೆ ಅಶೋಕ್‌ ಮೃತಪಟ್ಟಿರುವ ವಿಚಾರ ಬರಸಿಡಿಲಿನಂತೆ ಬಂದೆರಗಿದೆ.

Comments are closed.