PM Modi: ಪ್ರಧಾನಿ ಮೋದಿ ಇರೋ ವಿಮಾನದ ಮೇಲೆ ಉಗ್ರರ ದಾಳಿ ಎಚ್ಚರಿಕೆ!!

Share the Article

PM Modi: ಪ್ರಧಾನಿ ನರೇಂದ್ರ ಮೋದಿ ಇರುವ ವಿಮಾನದ ಮೇಲೆ ದಾಳಿ ನಡೆಸುವುದಾಗಿ ಉಗ್ರರು ಬೆದರಿಕೆ ಹಾಕಿದ್ದಾರೆ ಎಂದು ಮುಂಬೈ ಪೊಲೀಸರು ಅಚ್ಚರಿ ಮಾಹಿತಿ ನೀಡಿದ್ದಾರೆ.

 

ಹೌದು, ಮೋದಿ ಅವರು ಫ್ರಾನ್ಸ್, ಅಮೆರಿಕ ಪ್ರವಾಸಕ್ಕೆ ತೆರಳುವ ಮುನ್ನ ಈ ಬೆದರಿಕೆ ಬಂದಿತ್ತು. ಪ್ರಧಾನಿ ಮೋದಿ ವಿದೇಶಕ್ಕೆ ಅಧಿಕೃತ ಭೇಟಿಗೆ ತೆರಳುತ್ತಿರುವಾಗ ಅವರ ವಿಮಾನದ ಮೇಲೆ ಭಯೋತ್ಪಾದಕರು ದಾಳಿ ಮಾಡಬಹುದು ಎಂಬ ಎಚ್ಚರಿಕೆಯ ಕರೆ ಮುಂಬೈ ಪೊಲೀಸರಿಗೆ ಬಂದಿರುವುದಾಗಿ ತಿಳಿದು ಬಂದಿದೆ.

 

ಅಂದಹಾಗೆ ಫೆಬ್ರವರಿ 11 ರಂದು ಮುಂಬೈ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಬಂದಿದ್ದು, ಪ್ರಧಾನಿ ಮೋದಿ ವಿದೇಶಕ್ಕೆ ಅಧಿಕೃತ ಭೇಟಿಗೆ ತೆರಳುತ್ತಿರುವಾಗ ಅವರ ವಿಮಾನದ ಮೇಲೆ ಭಯೋತ್ಪಾದಕರು ದಾಳಿ ಮಾಡಬಹುದು ಎಂದು ಎಚ್ಚರಿಸಲಾಗಿದೆ. ಮಾಹಿತಿಯ ಗಂಭೀರ ಸ್ವರೂಪವನ್ನು ಪರಿಗಣಿಸಿ, ಪೊಲೀಸರು ಇತರ ಸಂಸ್ಥೆಗಳಿಗೆ ಮಾಹಿತಿ ನೀಡಿ ತನಿಖೆ ಆರಂಭಿಸಿದ್ದರು ಎಂದು ಎಎನ್​ಐ ವರದಿ ಮಾಡಿದೆ. ಪ್ರಧಾನಿ ಮೋದಿ ಅವರ ವಿಮಾನದ ಮೇಲೆ ಭಯೋತ್ಪಾದಕ ದಾಳಿಯ ಬೆದರಿಕೆ ಬಂದ ನಂತರ, ಭದ್ರತಾ ಪಡೆಗಳ ತಂಡಗಳು ಈ ವಿಷಯದ ಬಗ್ಗೆ ತನಿಖೆ ನಡೆಸಲು ಪ್ರಾರಂಭಿಸಿದವು. ಕರೆ ಮಾಡುತ್ತಿರುವ ವ್ಯಕ್ತಿ ಯಾರೆಂದು ಕಂಡುಹಿಡಿಯಲು ಪ್ರಯತ್ನಗಳು ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.

Comments are closed.