Sullia: ಕುದ್ಪಾಜೆಗೆ ಒಲಿದು ಬಂದ “ಸೈಲೆಂಟ್ ಸ್ಟಾರ್” ಅವಾರ್ಡ್; ಪ್ರಾಮಾಣಿಕ ಸೇವೆಯನ್ನು ಗುರುತಿಸಿದ ಜೆಸಿಐ ಸುಳ್ಯ

“ಕಾಯಕವೇ ಕೈಲಾಸ” ಎಂಬ ಬಸವಣ್ಣನವರ ನಾನುಡಿಯಂತೆ ಬಡತನದಲ್ಲೂ ನಿಷ್ಠೆಯಿಂದ ಹಿಡಿದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ ಮುಗಿಸಿಕೊಡುವ ಜಾಣ್ಮೆಯ ವ್ಯಕ್ತಿಯಾಗಿ ಚಿರಪರಿಚಿತರಾಗಿರುವ ಇವರು ರಾತ್ರಿ ಹಗಲೆನ್ನದೇ ಸಹಾಯಕ್ಕೆ ಧಾವಿಸುವ ಸರಳ ವ್ಯಕ್ತಿತ್ವದ ವ್ಯಕ್ತಿ ರಮೇಶ್ ಕುದ್ಪಾಜೆ. ಇವರು ಹಳೆಗೇಟು,ಹೊಸಗದ್ದೆ,ಜಯನಗರ,ನಾರಾಜೆ,ಕುದ್ಪಾಜೆ, ಕೊಯಿಂಗೋಡಿ,ಕೊರಂಬಡ್ಕ ಇನ್ನಿತರ ಬಾಗಗಳಲ್ಲಿ ಅಡಿಕೆ ಕೊಯ್ಯುವುದು,ಅಡಿಕೆ ಮರಕ್ಕೆ ಔಷಧಿ ಸಿಂಪಡಿಸುವುದು / ತೆಂಗಿನ ಮರವನ್ನು* ಏರುವ, ಪ್ರಾಮಾಣಿಕ ಸೇವೆಯನ್ನು ಸರಿ ಸುಮಾರು 25 -30 ವರ್ಷಗಳಿಂದ ಕರ್ತವ್ಯ ನಿರ್ವಹಿಸಿಕೊಂಡು ಬರುತ್ತಿದ್ದಾರೆ.ಇವರು 45 ರಿಂದ 50 ತೋಟಗಳನ್ನು ನೋಡಿ ಕೊಳ್ಳುವ ಏಕೈಕ ವ್ಯಕ್ತಿಯಾಗಿ ಊರಿನಲ್ಲಿ ಚಿರಪರಿಚಿತರಾಗಿದ್ದಾರೆ.ಇವರ ಈ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಜೆಸಿಐ ಸುಳ್ಯ ಪಯಸ್ವಿನಿ ಯು “ಸಲ್ಯೂಟ್ ದಿ ಸೈಲೆಂಟ್ ಸ್ಟಾರ್” ಗೌರವಕ್ಕೆ ಆಯ್ಕೆ ಮಾಡಲಾಯಿತು.
ಫೆ 9 ರಂದು ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ದೈವಸ್ಥಾನದಲ್ಲಿ ರಮೇಶ್ ಕುದ್ಪಾಜೆ ಅವರಿಗೆ ಸಲ್ಯೂಟ್ ದಿ ಸೈಲೆಂಟ್ ಸ್ಟಾರ್ ಗೌರವವನ್ನು ನೀಡಿ ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಜೇಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷ ಜೇಸಿ ಸುರೇಶ್ ಕಾಮತ್, ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ತಾಲೂಕು ಘಟಕ ಕಾರ್ಯಕಾರಿಣಿ ಸಮಿತಿ ಸದಸ್ಯರು ಹಾಗೂ ಶ್ರೀ ಕ್ಷೇತ್ರ ಕೊರಂಬಡ್ಕ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾಗಿರುವ ಕೇಶವ ಮಾಸ್ಟರ್ ಹೊಸಗದ್ದೆ ಅತಿಥಿಗಳಾಗಿ ಶುಭ ಹಾರೈಸಿದರು.ಬಾಲಮುರಳಿ ಕುದ್ಪಾಜೆ,ಸುಳ್ಯ ಪಯಸ್ವಿನಿ ಕೋಶಾಧಿಕಾರಿ ಜೇಸಿ ಶಶ್ಮಿ ಭಟ್ ಅಜ್ಜಾವರ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಆಡಳಿತ ಸಮಿತಿ ಸಂಚಾಲಕ ಜಗನ್ನಾಥ ಜಿ, ಕಾರ್ಯದರ್ಶಿ ಸುಂದರ ಕುದ್ಪಾಜೆ, ನೇಮೋತ್ಸವ ಸಮಿತಿಯ ಗೌರವಾಧ್ಯಕ್ಷ ರಮೇಶ್ ಇರಂತಮಜಲು ಪದಾಧಿಕಾರಿಗಳು,ಫ್ರೆಂಡ್ಸ್ ಕ್ಲಬ್ (ರಿ) ಜಯನಗರ ಇದರ ಖಜಾಂಜಿ ಪ್ರಸನ್ನ ಕುದ್ಪಾಜೆ ,ಉಪಾಧ್ಯಕ್ಷ ನಿತಿನ್ ಕೊಯಿಂಗೋಡಿ ಹಾಗೂ ಸದಸ್ಯರು, ಜಯನಗರ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಶಾಂತ ಕುದ್ಪಾಜೆ, ನಗರ ಪಂಚಾಯತ್ ಮಾಜಿ ಸದಸ್ಯರಾದ ರೋಹಿತ್ ಕೊಯಿಂಗೋಡಿ ಮೊದಲಾದವರು ಭಾಗವಹಿಸಿದ್ದರು.
ವರದಿ : ಜೆಜೆಎಸ್
Comments are closed.