Padubidri: ಬಸ್ ಚಾಲನೆ ವೇಳೆ ಕಾಡಿದ ಹಠಾತ್ ಎದೆನೋವು; ಹೆದ್ದಾರಿ ಪಕ್ಕ ಇಳಿಜಾರಿಗಿಳಿದ ಬಸ್

Padubidri: ಚಾಲಕನಿಗೆ ಹಠಾತ್ ಎದೆನೋವು ಕಾಣಿಸಿಕೊಂಡ ಕಾರಣ ಬಸ್ ಹೆದ್ದಾರಿ ಪಕ್ಕದ ಇಳಿಜಾರಿಗಿಳಿದು ನಿಂತಿರುವ ಘಟನೆಯೊಂದು ಇಂದು (ಫೆ.12) ಬುಧವಾರ ನಡೆದಿದೆ.
ತಡೆರಹಿತ ಬಸ್ಸೊಂದು ತೆಂಕ ಎರ್ಮಾಳಿನ ಮಸೀದಿ ಬಳಿ ಉಡುಪಿಯತ್ತ ಹೋಗುತ್ತಿತ್ತು. ಆಗ ಬಸ್‌ನ ಚಾಲಕರಾದ ಶಂಭು ಎಂಬುವವರಿಗೆ ದಿಢೀರ್ ಅನಾರೋಗ್ಯ ಕಂಡಿದೆ. ಘಟನೆಯ ನಂತರ ಚಾಲಕ ಶಂಬು ಹಾಗೂ ಗಾಯಗೊಂಡಿದ್ದ ಪ್ರಯಾಣಿಕರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹೆಚ್ಚಿನ ವಿವರ ಇನ್ನಷ್ಟೇ ತಿಳಿದು ಬರಬೇಕಿದೆ.
Comments are closed.