SSLC Exam: ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆ ಸಮಯ ಬದಲು

Share the Article

SSLC Exam: ರಾಜ್ಯ ಮಟ್ಟದ ಎಸ್ಸೆಸ್ಸೆಲ್ಸಿ ಪೂರ್ವಸಿದ್ಧತಾ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದೆ.

ಫೆ.25ರಿಂದ ಮಾ. 4ರವರೆಗೆ ಪರೀಕ್ಷೆ ನಡೆಯಲಿದೆ. ಮಾ.1ರಿಂದ ದ್ವಿತೀಯ ಪಿಯು ಪರೀಕ್ಷೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಸಮಸ್ಯೆಯಾಗುವುದನ್ನು ತಪ್ಪಿಸುವ ಉದ್ದೇಶದಿಂದ ಹಿಂದಿ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಪರೀಕ್ಷೆಗಳ ಪರೀಕ್ಷಾ ಸಮಯ ಬದಲಾವಣೆ ಮಾಡಲಾಗಿದೆ.

ಫೆ.25- ಪ್ರಥಮ ಭಾಷೆ ಕನ್ನಡ, ಫೆ.27-ಗಣಿತ, ಫೆ.28- ದ್ವಿತೀಯ ಭಾಷೆ (ಇಂಗ್ಲಿಷ್, ಕನ್ನಡ), ಮಾ. 1- ಹಿಂದಿ ಅಥವಾ ತೃತೀಯ ಭಾಷೆ, ಮಾ. 3- ವಿಜ್ಞಾನ, ಮಾ. 4 – ಸಮಾಜ ವಿಜ್ಞಾನ ಪರೀಕ್ಷೆ ಇರಲಿದೆ. ಮೊದಲ ಮೂರು ಪರೀಕ್ಷೆಗಳು ಬೆಳಗ್ಗೆ 10ರಿಂದ ಮಧ್ಯಾಹ್ನ 1.15ರವರೆಗೆ ನಡೆಯಲಿವೆ. ನಂತರದ ಮೂರು ಪರೀಕ್ಷೆಗಳು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5/5.15ರವರೆಗೆ ನಡೆಯಲಿವೆ ಎಂದು ಎಂದು ಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ.

ಪ್ರಥಮ ಭಾಷೆಯ ಪರೀಕ್ಷೆ ನೂರು ಅಂಕಕ್ಕೆ ನಡೆದರೆ, ಉಳಿದ ವಿಷಯಗಳ ಪರೀಕ್ಷೆಗಳು 80 ಅಂಕಗಳಿಗೆ ನಡೆಯಲಿವೆ. ಎಸ್ಸೆಸ್ಸೆಲ್ಸಿ ಪರೀಕ್ಷೆ -1ರ ವೇಳಾಪಟ್ಟಿ ಯನ್ನು ಮಂಡಳಿ ಈಗಾಗಲೇ ಪ್ರಕಟಿಸಿದ್ದು, ಮಾ. 21 ರಿಂದ ಏ.4ರವರೆಗೆ ನಡೆಯಲಿದೆ.

Comments are closed.