Hassan: ಗೃಹಪ್ರವೇಶಕ್ಕೂ ಮೊದಲೇ ಮನೆ ಸೀಜ್!

Hassan: ಮೈಕ್ರೋಫೈನಾನ್ಸ್ ಅಟ್ಟಹಾಸ ಹೆಚ್ಚುತ್ತಿದ್ದು, ಇದಕ್ಕೆ ನಿದರ್ಶನವೆನ್ನುವಂತೆ ತಾಲೂಕಿನ ದೊಡ್ಡ ಆಲದಹಳ್ಳಿಯಲ್ಲಿ ಸಾಲ ಮರುಪಾವತಿ ಮಾಡಲಿಲ್ಲ ಎನ್ನುವ ಕಾರಣಕ್ಕೆ ಫೈನಾನ್ಸ್ ಸಿಬ್ಬಂದಿ ಇನ್ನೂ ಗೃಹ ಪ್ರವೇಶ ಮಾಡದ ಮನೆಗೆ ಬೀಗ ಹಾಕಿ ನಿಷ್ಕರುಣಿಯಿಂದ ನಡೆದುಕೊಂಡಿರುವ ಕುರಿತು ವರದಿಯಾಗಿದೆ.

ಗ್ರಾಮದ ಮಂಜೇಗೌಡ ಮನೆ ಕಟ್ಟಲೆಂದು ಆಧಾರ್ ಹೌಸಿಂಗ್ ಫೈನಾನ್ಸ್‌ನಿಂದ ಒಂಭತ್ತು ಲಕ್ಷ ರೂ. ಸಾಲ ಪಡೆದಿದ್ದರು. ಆದರೆ ಸಕಾಲಕ್ಕೆ ಹಣ ಮರುಪಾವತಿ ಮಾಡಲಿಲ್ಲ ಎನ್ನುವ ಕಾರಣಕ್ಕೆ ಹೊಸ ಮನೆಯ ಗೃಹ ಪ್ರವೇಶಕ್ಕೂ ಮುನ್ನ ಮನೆಗೆ ಬೀಗ ಜಡಿಯಲಾಗಿದೆ. ಮಂಜೇಗೌಡ ಅವರ ಪುತ್ರ ಅಪಘಾತಕ್ಕೀಡಾಗಿದ್ದರಿಂದ ಕುಟುಂಬಕ್ಕೆ ಸಾಲ ಕಟ್ಟಲು ಆಗಲಿಲ್ಲ. ಆದರೂ ಇದಕ್ಕೆ ಬೆಲೆ ಕೊಡದೆ ಪೈನಾನ್ಸ್ ನವರು ಮನೆಗೆ ಬೀಗ ಜಡಿದಿದ್ದರು. ಆರು ತಿಂಗಳಿನಿಂದ ಕುಟುಂಬವು ಕೊಟ್ಟಿಗೆಯಲ್ಲಿಯೇ ನೆಲೆಸಿತ್ತು. ಅನಂತರ ಈ ಸುದ್ದಿ ಮಾಧ್ಯಮದಲ್ಲಿ ಪ್ರಕಟಗೊಂಡ ಬಳಿಕ ರೈತ ಸಂಘದ ಮುಖಂಡರು ಗ್ರಾಮಕ್ಕೆ ತೆರಳಿ ಮನೆಗೆ ಹಾಕಿದ್ದ ಬೀಗಗಳನ್ನು ಒಡೆದು ಮಂಜೇಗೌಡ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ ಎನ್ನುವ ಕುರಿತು ವರದಿಯಾಗಿದೆ.
Comments are closed.