Bantwala: ಚಾಲನೆ ವೇಳೆ ಚಾಲಕನಿಗೆ ಮೂರ್ಛೆರೋಗ; ಡಿವೈಡರ್‌ ಮೇಲೆ ಹತ್ತಿ ನಿಂತ ಲಾರಿ

Share the Article

Bantwala: ರಾ.ಹೆ.75 ರ ತುಂಬೆ ಸಮೀಪ ಚಾಲಕನೋರ್ವನಿಗೆ ಮೂರ್ಛೆ ರೋಗ ಬಂದು ಲಾರಿಯೊಂದು ಡಿವೈಡರ್‌ ಮೇಲೆ ಹತ್ತಿ ಸುಮಾರು 100 ಮೀ.ನಷ್ಟು ಚಲಿಸಿ, ನಿಂತಿರುವ ಘಟನೆಯೊಂದು ನಡೆದಿದೆ. ಸೀಟಿನಲ್ಲಿ ಬಿದ್ದಿದ್ದ ಚಾಲಕನನ್ನು ಸ್ಥಳೀಯರು ತುಂಬೆ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವ ಕುರಿತು ವರದಿಯಾಗಿದೆ. ಲಾರಿ ಬೆಂಗಳೂರಿನಿಂದ ಮಂಗಳೂರಿಗೆ ಚಲಿಸುತ್ತಿದ್ದ ಸಂದರ್ಭದಲ್ಲಿ ಈ ಅವಘಡ ನಡೆದಿದೆ.

ಫೆ.12 (ಬುಧವಾರ) ಇಂದು ಬೆಳಗ್ಗೆ ಸರಿಸುಮಾರು 7.45 ಕ್ಕೆ ನಡೆದಿದ್ದು, ಡಿವೈಡರ್‌ ಮೇಲೆ ಅಳವಡಿಸಿದ್ದ ರಸ್ತೆ ಸೂಚನಾ ಫಲಕಕ್ಕೆ ಹಾನಿಯಾಗಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿ ಉಂಟಾಗಿಲ್ಲ.

Comments are closed.