ವಿಶ್ವನಾಥನ ದರ್ಶನ ಪಡೆದು ಮಲಗಿದ್ದಲ್ಲೇ ಸಾವಿಗೀಡಾದ ಹಿರಿಯ ಕ್ರೀಡಾಪಟು

Share the Article

Varanasi: ಮಂಗಳೂರು ಮೂಲದ ಹಿರಿಯ ಕ್ರೀಡಾಪಟು ಬೃಂದಾ ಪ್ರಭು ಅವರು ತೀರ್ಥಯಾತ್ರೆಗೆಂದು ಹೋಗಿದ್ದ ಸಂದರ್ಭದಲ್ಲಿ ಮಲಗಿದ್ದಲ್ಲಿಯೇ ಮೃತ ಹೊಂದಿದ ಘಟನೆ ನಡೆದಿದೆ. ಬೃಂದಾ (68) ಅವರು ಕುಂಭ ಮೇಳಕ್ಕೆ ಹೋಗಿ ಪುಣ್ಯ ಸ್ನಾನದ ನಂತರ ಭಾನುವಾರ ಸಂಜೆ ವಿಶ್ವನಾಥನ ದರ್ಶನ ಪಡೆದು ಕೊಠಡಿಯಲ್ಲಿ ಮಲಗಿದ್ದಾಗ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.

ಫುಟ್‌ಬಾಲ್‌ ಆಟಗಾರ್ತಿಯಾಗಿ ಗುರುತಿಸಿಕೊಂಡಿರುವ ಬೃಂದಾ ಅವರು ಭಾರತದ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದು, ಬೆಂಗಳೂರು ವಿಶ್ವವಿದ್ಯಾಲಯದ ವಾಲಿಬಾಲ್‌ ತಂಡವನ್ನು ಪ್ರತಿನಿಧಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟು, ಧ್ಯಾನ್‌ ಚಂದ್‌ ಪ್ರಶಸ್ತಿಯ ವಿಜೇತ ಉದಯ್‌ ಪ್ರಭು ಇವರ ಪತಿ. ಇವರಿಬ್ಬರ ಪುತ್ರಿ ಅಮೆರಿಕದಲ್ಲಿದ್ದಾರೆ.

ಇಂದು (ಮಂಗಳವಾರ ಫೆ.11) ವಾರಾಣಿಸಿಗೆ ಬೃಂದಾ ಅವರ ಪತಿ ತೆರಳಿದ್ದು, ಅಲ್ಲೇ ಅಂತ್ಯಕ್ರಿಯೆ ಮಾಡಲಾಗವುದಾಗಿ ವರದಿಯಾಗಿದೆ.

Comments are closed.