Harish Poonja: ಬೆಳ್ತಂಗಡಿಗೆ ಗುಡ್ ಬೈ, ಮುಂದಿನ ಚುನಾವಣೆಗೆ ಈ ಕ್ಷೇತ್ರದ ಹರೀಶ್ ಪೂಂಜಾ ಸ್ಪರ್ಧೆ?

Share the Article

Harish Poonja: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ರಾಜಕೀಯವಾಗಿ, ಧಾರ್ಮಿಕವಾಗಿ ಹಾಗೂ ಇತರ ಹಲವಾರು ವಿಚಾರಗಳಿಂದ ಸದಾ ಸುದ್ದಿಯಲ್ಲಿರುವಂತಹ ಒಂದು ಕ್ಷೇತ್ರ. ಈ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜಾ ಅವರು ಕೂಡ ಆಗ ಸುದ್ಧಿಯಲ್ಲಿರುತ್ತಾರೆ. ಎರಡು ಅವಧಿಗೆ ಶಾಸಕರಾಗಿ ಆಯ್ಕೆಯಾಗಿರುವ ಪೂಂಜ ಅವರು ಬೆಳ್ತಂಗಡಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಆದರೆ ಈಗ ಅಚ್ಚರಿ ಎಂಬಂತೆ ಹರೀಶ್ ಪೂಂಜಾ ಅವರು ಬೆಳ್ತಂಗಡಿಗೆ ಗುಡ್ ಬೈ ಹೇಳಿ ಮುಂದಿನ ಚುನಾವಣೆಗೆ ಬೇರೆ ಕ್ಷೇತ್ರದ ತಾಲೂಕ ಮಾಡಿ ಹೊರಟಿದ್ದಾರೆ ಎನ್ನುವ ಸುದ್ದಿ ಸದ್ದು ಮಾಡುತ್ತಿದೆ.

ಹೌದು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರಿಗೆ ಸಂಬಂಧಿಸಿದಂತೆ ಒಂದು ಸುದ್ದಿ ಕ್ಷೇತ್ರದಾದ್ಯಂತ ಸಂಚಲನ ಸೃಷ್ಟಿಸಿದೆ. ಎರಡು ಅವಧಿಗೆ ಬಿಜೆಪಿಯಿಂದ ಬೆಳ್ತಂಗಡಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವ ಹರೀಶ್ ಪೂಂಜಾ ಅವರು ಮುಂದಿನ ಚುನಾವಣೆಗೆ ಮತ್ತೊಂದು ಹೊಸ ಕ್ಷೇತ್ರವನ್ನು ಅರಸಲಿದ್ದಾರೆ ಎಂಬ ಸುದ್ದಿ ಇದಾಗಿದೆ. ಕೆಲವು ದಿನಗಳಿಂದ ಹರೀಶ್ ಪೂಂಜ ಅವರೇ ತಮ್ಮ ಆಪ್ತವಲಯದಲ್ಲಿ ನಾನು ಮುಂದಿನ ಚುನಾವಣೆಯಿಂದ ಬೆಳ್ತಂಗಡಿಯಲ್ಲಿ ಸ್ಪರ್ಧಿಸುವುದಿಲ್ಲ, ಬೆಂಗಳೂರು ಅಥವಾ ಪುತ್ತೂರು ಯಾವುದಾದರೂ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲುತ್ತೇನೆ ಎಂದು ಹೇಳಿದ್ದಾರೆ ಎಂಬ ವಿಚಾರ ಮುನ್ನಲೆಗೆ ಬಂದಿದೆ.

 

ಆದರೆ ಇದು ಎಷ್ಟು ಸತ್ಯ ಎಷ್ಟು ಸುಳ್ಳು ಎಂಬುದು ಯಾರಿಗೂ ಗೊತ್ತಿಲ್ಲ. ಈ ಕುರಿತಾಗಿ ಜನನಾಯಕ ಎಂದು ಖ್ಯಾತಿಗಳಿಸಿರುವ ಹರೀಶ್ ಪೂಂಜ ಅವರೇ ಸ್ಪಷ್ಟೀಕರಣ ನೀಡಬೇಕಿದೆ. ಅಲ್ಲದೆ ಭ್ರಷ್ಟಾಚಾರ ಸೇರಿದಂತೆ ಅನೇಕ ಸಮಾಜಘಾತಕ ಕೆಲಸಗಳ ವಿರುದ್ಧ ತೊಡೆ ತಟ್ಟಿರುವ ಜನಪ್ರಿಯ ಶಾಸಕರು ತಮ್ಮ ಕ್ಷೇತ್ರವನ್ನು ತೊರೆಯದಿರಲಿ ಎಂದು ಅನೇಕ ಅಭಿಮಾನಿಗಳು ಬೇಡಿಕೊಳ್ಳುತ್ತಿದ್ದಾರೆ. ಪೂಂಜ ಅವರು ಇದಕ್ಕೆ ಏನು ಹೇಳಲಿದ್ದಾರೆ ಎಂದು ಕಾದು ನೋಡಬೇಕಿದೆ.

Comments are closed.