Darshan: ಕ್ಯಾಮರಾ ಮುಂದೆ ಬಂದು ಇಡೀ ಅಭಿಮಾನಿ ಬಳಗಕ್ಕೆ ದೊಡ್ಡ ಶಾಕ್ ನೀಡಿದ ದರ್ಶನ್ !!

Share the Article

Darshan: ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ ಆರೋಪಿಯಾಗಿ ಸದ್ಯ ಜಾಮೀನು ಪಡೆದು ಬಿಡುಗಡೆಯ ಭಾಗ್ಯ ಕಂಡಿರುವ ನಟ ದರ್ಶನ್ ಅವರು ಇದೀಗ ರಿಲೀಫ್ ಮೂಡ್ ನಲ್ಲಿ ಇದ್ದಾರೆ. ಇದು ಅಭಿಮಾನಿಗಳಿಗೂ ಅಪಾರ ಸಂತಸವನ್ನು ಉಂಟು ಮಾಡಿದೆ. ಆದರೆ ಈಗ ಅಚ್ಚರಿ ಎಂಬಂತೆ ದರ್ಶನ್ ಅವರು ಕ್ಯಾಮರಾ ಮುಂದೆ ಬಂದು ಅಭಿಮಾನಿಗಳೆಲ್ಲರಿಗೂ ಶಾಕ್ ನೀಡಿದ್ದಾರೆ.

ದರ್ಶನ್ ಹೇಳಿದ್ದು ಏನು?
ಎಲ್ಲ ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನಮಸ್ಕಾರ. ಧನ್ಯವಾದ ಹೇಳಿದ್ರೂ , ಏನೇ ಪದ ಬಳಕೆ ಮಾಡೊದ್ರೂ ತುಂಬಾ ಕಡಿಮೆ. ನೀವು ತೋರಿಸದಷ್ಟು ಪ್ರೀತಿ ಅಭಿಮಾನ, ಅದು ಯಾವ ತರ ಅದನ್ನು ರಿಟರ್ನ್‌ ಮಾಡಲಿ ಗೊತ್ತಾಗ್ತಿಲ್ಲ. ಈಗ ಏನಕ್ಕೆ ನಾನು ಕ್ಯಾಮೆರ ಮುಂದೆ ಬಂದೆ ಅಂದರೆ ನನ್ನ ಬರ್ತ್‌ಡೇ ವಿಚಾರವಾಗಿ.

ನನಗೂ ಆಸೆ ಇತ್ತು. ನೀವು ಆಸೆ ಪಟ್ಟಿದ್ರಿ. ನಿಮ್ಮನ್ನ ನಾನು ಮೀಟ್‌ ಮಾಡಬೇಕು ಅಂತ ನನಗೂ ಆಸೆ ಇತ್ತು. ಈ ಸಲ ಒಂದು ಸಮಸ್ಯೆ ಏನು ಅಂದರೆ, ದೊಡ್ಡ ಸಮಸ್ಯೆ ಅಂತ ಹೇಳ್ತಿಲ್ಲ. ಒಂದೇ ಒಂದು ಸಮಸ್ಯೆ ಅಂದರೆ ಅದು ಆರೋಗ್ಯ ವಿಚಾರ. ನನಗೆ ತುಂಬಾ ಹೊತ್ತು ನಿಂತುಕೊಳ್ಳಲು ಆಗಲ್ಲ. ಮತ್ತೆ ನನ್ನೆಲ್ಲ ನಿರ್ಮಾಪಕರಿಗೂ ಧನವ್ಯವಾದ ಇಷ್ಟು ದಿನ ಕಾದಿದ್ರು. ಇಷ್ಟು ದಿನ ಕಾದಿದ್ದಾರೆ. ಅವರಿಗೆ ಅನ್ಯಾಯ ಮಾಡಬಾರದು. ಖಂಡಿತ ಮುಂದೆ ಸಿಗ್ತೀನಿ. ಸಲ್ಪ ದಿನ ಹೋಗಲಿ.’ ಎಂದು ದರ್ಶನ್ ಹೇಳಿದ್ದಾರೆ.

Comments are closed.