MLA Krishnaiah Shetty: ಬ್ಯಾಂಕ್‌ ವಂಚನೆ ಕೇಸಿನಲ್ಲಿ ಕೃಷ್ಣಯ್ಯ ಶೆಟ್ಟಿ ದೋಷಿ

Share the Article

MLA Krishnaiah Shetty: ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿಗೆ ಜೈಲು ಶಿಕ್ಷೆಯಾಗಿದೆ. 2008 ರಲ್ಲಿ ಎಸ್‌ಬಿಎಂ ಬ್ಯಾಂಕ್‌ ವಂಚನೆ, ಪೋರ್ಜರಿ ಪ್ರಕರಣದಲ್ಲಿ ತಪ್ಪಿತಸ್ಥರು ಎಂದು ಕೋರ್ಟ್‌ ತೀರ್ಪು ನೀಡಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ತಪ್ಪಿತಸ್ಥ ಎಂದು ತೀರ್ಪು ನೀಡಿದ್ದು, ಶಿಕ್ಷೆಯ ಪ್ರಮಾಣ ಪ್ರಕಟವಾಗಬೇಕಿದೆ.

 

1993 ರಲ್ಲಿ ಬಾಲಾಜಿಕೃಪಾ ಎಂಟರ್‌ ಪ್ರೈಸಸ್‌ನ ಮಾಲೀಕರಾಗಿದ್ದ ಕೃಷ್ಣಯ್ಯ ಶೆಟ್ಟಿ ಅವರು ಗೃಹಸಾಲವನ್ನು ತೆಗೆದುಕೊಳ್ಳಲಾಗಿತ್ತು. ಸರಕಾರಿ ನೌಕರರ ದಾಖಲೆ ಸೃಷ್ಟಿಸಿ ಸಾಲ ಪಡೆದಿದ್ದರು ಎನ್ನುವ ಆರೋಪವಿತ್ತು. ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಐಟಿಐ, ಹೆಚ್‌ಎಎಲ್‌, ಬಿಇಎಂಎಲ್‌, ಬಿಎಸ್‌ಎನ್‌ಎಲ್‌ ನೌಕರರ ಸ್ಯಾಲರಿ ಸ್ಲಿಪ್‌ ಸಲ್ಲಿಸಿ ಸಾಲ ತಗೊಂಡಿದ್ದರು ಮಾಜಿ ಸಚಿವ. ನಕಲಿ ಸ್ಯಾಲರಿ ಸ್ಲಿಪ್‌ ಬಳಸಿ ವಂಚನೆ ಪ್ರಕರಣ ಇದಾಗಿದೆ.

 

ಒಟ್ಟು 7.17 ಕೋಟಿ ರೂ ಬ್ಯಾಂಕ್‌ ಸಾಲವನ್ನು ನಕಲಿ ದಾಖಲೆ ಸೃಷ್ಟಿಸಿ ಆರೋಪವಿತ್ತು. ಈ ಕುರಿತು ದೂರು ಆಧರಿಸಿ ಸಿಬಿಐ ತನಿಖೆ ಕೈಗೆತ್ತಿಕೊಂಡಿತ್ತು. ಬ್ಯಾಂಕ್‌ ಖಾತೆಗಳು, ಸಾಲ ವಿತರಣೆ ಕುರಿತು ಮಾಹಿತಿ ಪಡೆದು ಸಿಬಿಐ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿತ್ತು.

Comments are closed.