Ashok Kumar Rai: ‘ನನ್ನ ಹೆಸರೇಳಿ ಹಣ ಪಡೆದರೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ’ – ಅಧಿಕಾರಿಗಳ ವಿರುದ್ಧ ಸಿಡಿದೆದ್ದ ಪುತ್ತೂರು ಶಾಸಕ ಅಶೋಕ್ ರೈ !!

Ashok Kumar Rai: ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಅವರು ಭ್ರಷ್ಟ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದು ‘ನನ್ನ ಹೆಸರೇಳಿಕೊಂಡು ಹಣ ಪಡೆದರೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೌದು, ಸದಾ ಭ್ರಷ್ಟಾಚಾರದ ವಿರುದ್ಧ ನಿಲ್ಲುವ ಕಾಂಗ್ರೆಸ್ ಶಾಸಕ ಅಶೋಕ್ ರೈ (Ashok Rai) ಅವರು ಚುನಾವಣೆಗೂ ಮುಂಚಿತವಾಗಿಯೂ ಭ್ರಷ್ಟಾಚಾರದ (Corruption) ವಿರುದ್ಧ ಕೆಂಡಕಾರುತ್ತಿದ್ದರು. ತಾವು ಶಾಸಕರಾಗಿ ಆಯ್ಕೆಯಾಗಿ ಬಂದ್ರೆ ಲಂಚ, ಭ್ರಷ್ಟಾಚಾರ ಮುಕ್ತ ತಾಲೂಕನ್ನಾಗಿ ಮಾಡುವುದಾಗಿ ಹೇಳಿದ್ದರು. ಇದೀಗ ಈ ವಿಚಾರವಾಗಿ ಅಧಿಕಾರಿಗಳ ವಿರುದ್ಧ ಕೆಂಡ ಕಾರಿರುವ ಅವರು ‘ನನ್ನ ಹೆಸರಲ್ಲಿ ಹಣ ತಗೊಂಡ್ರೆ ಚಪ್ಪಲಿಯಲ್ಲಿ ಹೊಡಿತಿನಿ. ನನ್ನ ಹೆಸರಲ್ಲಿ ಕೆಲ ಅಧಿಕಾರಿಗಳು ಹಣ ತೆಗೆದುಕೊಳ್ಳುತ್ತಾರೆ ಎಂಬ ಮಾಹಿತಿ ಬಂದಿದೆ. ನಾನು ಯಾವತ್ತೂ ಕೂಡ ಯಾವುದೇ ಕೆಲಸಕ್ಕೆ ಯಾರಿಂದಲೂ ಹಣ ಪಡೆಯೋದಿಲ್ಲ. ಕೆಲ ಭ್ರಷ್ಟ ಅಧಿಕಾರಿಗಳು ನನ್ನ ಹೆಸರಲ್ಲಿ ಹಣ ಪಡೆದುಕೊಂಡು ವ್ಯವಹಾರ ಮಾಡುತ್ತಿದ್ದಾರೆ ಎಂಬುದು ಗಮನಕ್ಕೆ ಬಂದಿದೆ, ಹಾಗಾಗಿ ನಾನು ಎಚ್ಚರಿಕೆ ನೀಡ್ತಾ ಇದ್ದಾನೆ ಎಂದು ಗರಂ ಆಗಿದ್ದಾರೆ.

ಅಲ್ಲದೆ ‘ಈಗಾಗ್ಲೇ ಎಲ್ಲಾ ಅಧಿಕಾರಿಗಳನ್ನ ಕರೆದು ಅವರಿಗೆ ಎಚ್ಚರಿಕೆ ನೀಡಿದ್ದೇನೆ. ಯಾರೂ ಕೂಡ ಯಾವ ಕೆಲಸಕ್ಕೂ ಹಣ ಪಡೆದುಕೊಂಡು ಕೆಲಸ ಮಾಡ್ಬೇಡಿ. ಅಂತಹ ಭ್ರಷ್ಟ ಅಧಿಕಾರಿಗಳ ಬಗ್ಗೆ ಗಮನವಿಟ್ಟುಕೊಳ್ಳುತ್ತಿದ್ದೇನೆ’ ಎಂದು ಪುತ್ತೂರಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಶಾಸಕ ಅಶೋಕ್ ಕುಮಾರ್ ರೈ ಎಚ್ಚರಿಕೆ ನೀಡಿದ್ದಾರೆ.

Comments are closed.