Putturu : ಪುತ್ತೂರು ಉದ್ಯಮಿಯನ್ನು ಅಪಹರಿಸಿ 29 ಲಕ್ಷ ದೋಚಿದ ಪ್ರಕರಣ – ಆರೋಪಿಗಳ ಗುರುತು ಪತ್ತೆ!!

Putturu : ಬೆಂಗಳೂರಿನ ನೆಲಮಂಗಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಟ್ರಾನ್ಸ್‌ಪೊರ್ಟ್‌ ಮಾಲಕ ಇಕ್ಬಾಲ್‌ (35) ಎಂಬುವವರನ್ನು ನಗರದ ಕುಣಿಗಲ್‌ ಬೈಪಾಸ್‌ ಸಮೀಪದಲ್ಲಿ ಅಡ್ಡಗಟ್ಟಿದ ಗರುಡ ಗ್ಯಾಂಗ್‌ ಅಪಹರಣ ಮಾಡಿ 29 ಲಕ್ಷ ರೂ.ಗಳಿಗೂ ಹೆಚ್ಚು ಹಣ ದರೋಡೆ ಮಾಡಿ ಪರಾರಿಯಾಗಿರುವ ಘಟನೆಗೆ ಸಂಬಂಧಿಸಿದಂತೆ ಇದೀಗ ಆರೋಪಿಗಳ ಗುರುತು ಪತ್ತೆಯಾಗಿದೆ ಎನ್ನಲಾಗಿದೆ.

ಹೌದು, ಅಪಹರಣಕ್ಕೆ ಒಳಗಾದ ಉದ್ಯಮಿ ಇಕ್ಬಾಲ್ ಅವರು ದೂರು ನೀಡಿದ್ದು ಅಪಹರಣಕಾರರ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದಾರೆ. ಎಫ್‌ಐಆರ್‌ನಲ್ಲಿ ಅನುಮಾನ ವ್ಯಕ್ತಪಡಿಸಿ ದಕ್ಷಿಣ ಕನ್ನಡದ ಇಬ್ರಾಹಿಂ, ಇಸಾಕ್‌, ರಿಜ್ವಾನ್‌ ಹಾಗೂ ಇನ್ನಿತರರ ಹೆಸರು ನೀಡಿದ್ದಾರೆ. ಖದೀಮರ ಗುಂಪಿನಲ್ಲಿದ್ದ ರಿಜ್ವಾನ್‌ ಅಪಹರಣವಾಗಿದ್ದ ಇಕ್ಬಾಲ್‌ ವಾಹನದಲ್ಲಿ 5 ವರ್ಷಗಳ ಕಾಲ ಡ್ರೈವರ್‌ ಆಗಿ ಕೆಲಸ ಮಾಡುತ್ತಿರುವ ವಿಚಾರವನ್ನು ಇಕ್ಬಾಲ್‌ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ.

ಏನಿದು ಪ್ರಕರಣ?
ಇಕ್ಬಾಲ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೊಣಾಲು ನಿವಾಸಿಯಾಗಿದ್ದು ಅಶೋಕ್‌ ಪೆಟ್ರೋಲಿಯಂ ಸಂಸ್ಥೆಯನ್ನು ಸ್ಥಾಪಿಸಿ ಟ್ರಾನ್ಸ್‌ಪೊರ್ಟ್‌ ನಡೆಸುತ್ತಿದ್ದಾರೆ. ಜ. 24ರಂದು ಬೆಂಗಳೂರಿಗೆ ಬಂದಿದ್ದ ಇಕ್ಬಾಲ್‌ ತನ್ನ ವ್ಯವಹಾರ ಮುಗಿಸಿಕೊಂಡು ಹಣ ಸಂಗ್ರಹಿಸಿ ಸ್ನೇಹಿತನ ಮನೆಗೆ ಭೇಟಿ ನೀಡಿ ಊರಿಗೆ ಹಿಂತಿರುಗಲು ನೆಲಮಂಗಲ ಮಾರ್ಗವಾಗಿ ಕಾರಿನಲ್ಲಿ ತೆರಳಿದ್ದರು. ರಾತ್ರಿ ಹೊಟೇಲ್‌ನಲ್ಲಿ ಊಟ ಮುಗಿಸಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮುಂದೆ ಕಾರಿನಲ್ಲಿ ಚಲಿಸುತ್ತಿದ್ದಾಗ ಕೆಎ 02 ಎಂಎನ್‌ 8122ನಂಬರಿನ ಟಯೋಟಾ ಇನೋವಾ ಕಾರಿನಲ್ಲಿ ಬಂದ ಕೆಲವರು ಕಾರು ಅಡ್ಡಗಟ್ಟಿ ಅಟ್ಯಾಕ್‌ ಮಾಡಿ ಗರುಡ ಗ್ಯಾಂಗ್‌ ಎಂದು ಚಿತ್ರಹಿಂಸೆ ನೀಡಿ ವಿವಿಧ ಖಾತೆಗಳಿಗೆ 15 ಲಕ್ಷ ಹಣವನ್ನು ವರ್ಗಾವಣೆ ಮಾಡಿಕೊಂಡು ಕಾರಿನಲ್ಲಿದ್ದ 1.23 ಲಕ್ಷ ಹಣ ಪಡೆದು ಸಂಕಲೇಶಪುರದ ಕಡೆ ಅಪಹರಣ ಮಾಡಿಕೊಂಡು ಹೋಗಿದ್ದಾರೆ.

ಅಲ್ಲದೆ 2 ದಿನದ ಅನಂತರ ಸಕಲೇಶಪುರದ ದೋಣಿಗಲ್‌ ರೆಸಾರ್ಟ್‌ಗೆ ಹೋಗಿ ಅಲ್ಲಿ ಇಕ್ಬಾಲ್‌ ಅಣ್ಣನಿಂದ 13 ಲಕ್ಷ ನಗದು ಹಣವನ್ನು ಪಡೆದು ಇಕ್ಬಾಲ್‌ನನ್ನು ಬಿಟ್ಟು ಆತನ ಮೊಬೈಲ್‌ ಕಾರನ್ನು ತೆಗೆದುಕೊಂಡು ದೂರು ನೀಡಿದರೆ ನಿನ್ನ ಹತ್ಯೆಮಾಡಿಬಿಡುತ್ತೇವೆಂದು ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ. ಘಟನೆಯಿಂದಾಗಿ ಹೆದರಿದ ಇಕ್ಬಾಲ್‌ ತಡವಾಗಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದು ಗರುಡ ಗ್ಯಾಂಗ್‌ ದೊಡ್ಡ ದರೋಡೆ ಪ್ರಕರಣ ಬೆಳಕಿಗೆ ಬಂದಿದೆ.

Comments are closed.