CM Siddaramaiah ಗೆ ಬಿಗ್ ಶಾಕ್ – ಮುಡಾ ಅಕ್ರಮ ಹಣ ವರ್ಗಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಭಾಗಿ?! ED ಜಪ್ತಿ ಆದೇಶದಲ್ಲಿ ಬಹಿರಂಗವಾಯಿತು ಸತ್ಯ

CM Siddaramaiah : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮುಡಾ ಅಕ್ರಮ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಅಕ್ರಮ ಹಣ ವರ್ಗಾವಣೆ ಯತ್ನದಲ್ಲಿ ಭಾಗಿಯಾಗಿದ್ದಾರೆಂದು ಇದೀಗ ED ಆದೇಶದಲ್ಲಿ ಬಯಲಾಗಿದೆ.
ಹೌದು, ಮುಡಾದಲ್ಲಿ ಸೈಟ್ ಗಳ ಹಂಚಿಕೆಯ ಪರಿಹಾರಾರ್ಥವಾಗಿ ಅಕ್ರಮ ಹಣ ವರ್ಗಾವಣೆ ಯತ್ನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಇ.ಡಿ. (ಜಾರಿ ನಿರ್ದೇಶನಾಯಲ) ಇತ್ತೀ ತಾತ್ಕಾಲಿಕವಾಗಿ ಸ್ಥಿರಾಸ್ತಿ ಜಪ್ತಿ ಮಾಡಿದ ಸಂಬಂಧದ ಆದೇಶದಲ್ಲಿ ಬಹಿರಂಗ ಪಡೆಸಿದ್ದು, ಅದರಲ್ಲಿ ಈ ಅಂಶ ಉಲ್ಲೇಖಿಸಿದೆ ಎಂದು ವರದಿಯಾಗಿದೆ.
ಜಮೀನನ್ನು 3,24,700 ಮುಡಾದಿಂದ ಸ್ವಾಧೀನ ಪಡೆದುಕೊಂಡಿದ್ದಾರೆ. ಜಮೀನನ್ನು ತಪ್ಪು ಮಾಹಿತಿ ಪ್ರಭಾವ ಬಳಸಿ ಡಿನೋಟಿಫಿಕೇಶನ್ ಮಾಡಲಾಗಿದೆ. ಬಿಎಂ ಮಲ್ಲಿಕಾರ್ಜುನಸ್ವಾಮಿ ಕೃಷಿ ಜಮೀನು ಎಂದು ಖರೀದಿ ಮಾಡುವ ಮೊದಲೇ ಮುಡಾ ಇಲ್ಲಿ ಬಡಾವಣೆಗಳನ್ನು ಅಭಿವೃದ್ಧಿಪಡಿಸಿತ್ತು. ನಿವೇಶನ ಹಂಚಿಕೆ ಮಾಡಿತ್ತು. ಇದಕ್ಕೆ ಯಾವ ತಕರಾರು ಎತ್ತಿಲ್ಲ ತಪ್ಪು ಸ್ಥಳ ಪರಿಶೀಲನೆ ವರದಿ ಆಧರಿಸಿ ಭೂಮಿ ಪರಿವರ್ತನೆ ಮಾಡಲಾಗಿತ್ತು.
14 ನಿವೇಶನ ಹಂಚಿಕೆಯಾದಾಗ ಯತೀಂದ್ರ ವರುಣ ಶಾಸಕರಾಗಿದ್ದರು. ಅದೇ ಸಮಯದಲ್ಲಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಮುಡಾ ಸದಸ್ಯರು ಆಗಿದ್ದರು. ಅಕ್ರಮ ನಿವೇಶನ ಹಂಚಿಕೆಯಾದಾಗ ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿದ್ದರು. ಎಸ್ ಜಿ ದಿನೇಶ್ ಕುಮಾರ್ ಸಿದ್ದರಾಮಯ್ಯ ಅವರ ಸಹಾಯಕರಾನಾಗಿದ್ದರು. ಅಲ್ಲದೇ ಸಿಟಿ ಕುಮಾರ್ ಮುಡಾ ಅಧಿಕಾರಿಗಳ ಮೇಲೆ ಪ್ರಭಾವ ಬೀರಿದ್ದರು. ಸಹಿ ನಕಲು ಮಾಡಿ ಸೈಟ್ ಹಂಚಿಕೆ ಆಗುವಂತೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಈ ಹಿಂದೆ ಮುಡಾ ಆಯುಕ್ತರಾಗಿದ್ದ ನಟೇಶ್ ಇದರಲ್ಲಿ ಶಮೀಲಾಗಿ ಈ ಪ್ರಕ್ರಿಯೆ ನಡೆಸಲಾಗಿದೆ. PMLA ಅಡಿ ತನಿಖೆ ಆರಂಭಿಸಿದ ನಂತರ ಸಿಎಂ ಪತ್ನಿ ಬಿ.ಎಂ.ಪಾರ್ವತಿಯವರು ಕಳೆದ ವರ್ಷ ಅ.1ರಂದು ಮುಡಾಗೆ 14 ನಿವೇಶನಗಳನ್ನು ಹಿಂದಿರುಗಿಸಿದ್ದಾರೆ. ಆದರೆ ನಿವೇಶನಗಳಗು ವಾಪಸ್ ಮಾಡಿದ್ದರೂ ಅಕ್ರಮ ಹಣ ವರ್ಗಾವಣೆಯ ಯತ್ನ ನಡೆದಿರುವುದು ಪತ್ತೆಯಾಗಿದೆ. ಸಿದ್ದರಾಮಯ್ಯ, ಪಾರ್ವತಿ, ಮಲ್ಲಿಕಾರ್ಜುನಸ್ವಾಮಿ, ದೇವರಾಜು, ಮುಡಾ ಅಧಿಕಾರಿಗಳು, ವ್ಯವಹಾರಸ್ಥರು, ಪ್ರಭಾವಿ ವ್ಯಕ್ತಿಗಳು ಶಾಮೀಲಾಗಿದ್ದಾರೆ ಎಂದು ಇ.ಡಿ.ಯ ತಾತ್ಕಾಲಿಕ ಜಪ್ತಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.
ಸುಮಾರು 1095 ಮುಡಾ ಸೈಟ್ ಅಕ್ರಮವಾಗಿ ಹಂಚಲಾಗಿದೆ. ಅಕ್ರಮ ಹಣ ವರ್ಗಾವಣೆ ಪಾರ್ವತಿಯವರ ಕೇಸ್ ನಲ್ಲಿ ಮಾತ್ರ ಅಲ್ಲ ಆಕ್ರಮವಾಗಿ ಸಾವಿರಾರು ಸೈಟ್ ಗಳನ್ನು ಅಕ್ರಮವಾಗಿ ಹಂಚಲಾಗಿದೆ. ಎಲ್ಲ ಅಂಶಗಳನ್ನು ಇಡಿ ತನಿಖೆಯಲ್ಲಿ ಪತ್ತೆ ಹಚ್ಚಿದೆ ಇಡಿಯ ತಾತ್ಕಾಲಿಕ ಜಪ್ತಿ ಆದೇಶದಲ್ಲಿ ಈ ಒಂದು ಅಂಶಗಳು ಉಲ್ಲೇಖವಾಗಿವೆ.
Comments are closed.