Kumbamela: ಲವರ್ ಕೊಟ್ಟ ಆ ಒಂದು ಐಡಿಯಾದಿಂದ ಕುಂಭಮೇಳದಲ್ಲಿ ಲಕ್ಷ ಲಕ್ಷ ಸಂಪಾದಿಸುತ್ತಿದ್ದಾನೆ ಯುವಕ !! ‘O’ ಬಂಡವಾಳ, ಕೈ ತುಂಬಾ ಗಳಿಕೆ

Kumbamela: ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ದೇಶದ ಸಾಂಸ್ಕೃತಿಕತೆ ಮಡುಗಟ್ಟಿ ನಿಂತಿದೆ. ದೇಶದ ಮೂಲೆ ಮೂಲೆಯಿಂದ ಬಂದ ಅನೇಕರು ತಮ್ಮ ಸಂಸ್ಕೃತಿಯನ್ನು ಬಿಂಬಿಸುವುದರೊಂದಿಗೆ ಹೊಟ್ಟೆಪಾಡಿಗಾಗಿ ತಮ್ಮ ವ್ಯಾಪಾರಗಳನ್ನು ಕೂಡ ನಡೆಸುತ್ತಿದ್ದಾರೆ. ಅಂತೆಯೇ ಇದೆ ಕುಂಭಮೇಳದಲ್ಲಿ ಬೇವಿನ ಕಡ್ಡಿ ಮಾರಿ ಲಕ್ಷ ಸಂಪಾದಿಸಬಹುದು ಎಂದರೆ ನೀವು ನಂಬುತ್ತೀರಾ?

ಹೌದು, ನಂಬಲೇಬೇಕು ಏಕೆಂದರೆ ಇನ್ನೊಬ್ಬ ಯುವಕ ತನ್ನ ಪ್ರಿಯತಮೆ ಕೊಟ್ಟ ಐಡಿಯಾದಿಂದ ಬೇವಿನ ಕಡ್ಡಿಯನ್ನು ಮಾರಿ ಲಕ್ಷ ಲಕ್ಷ ಸಂಪಾದಿಸುತ್ತಿದ್ದಾನೆ. ಸಧ್ಯ ಯುವಕನೋರ್ವ ಹಲ್ಲುಜ್ಜುವ ಬೇವಿನ ಕಡ್ಡಿ ಮಾರಿ ಕೋಟ್ಯಂತರ ರೂ ಆದಾಯ ಮಾಡುವ ಹೊಸ ಬಿಸಿನೆಸ್ ಐಡಿಯಾವನ್ನು ಹೇಳಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಅಂದಹಾಗೆ ಆದರ್ಶ್ ತಿವಾರ್ ಎಂಬುವವರು ಈ ವಿಡಿಯೋ ಅಪ್ಲೋಡ್ ಮಾಡಿದ್ದರು. ಆ ವ್ಯಕ್ತಿ ಕೇವಲ ಬೇವಿನ ಕಡ್ಡಿ ಮಾರಾಟ ಮಾಡಿ ಸುಮ್ಮನಾಗಿದ್ದರೆ ಈ ವಿಡಿಯೋ ವೈರಲ್ ಆಗುತ್ತಿರಲಿಲ್ಲ. ಆದರೆ ಈತ ಈ ಬೇವಿನ ಕಡ್ಡಿ ಮಾರಾಟದಿಂದ ಭಾರಿ ಆದಾಯ ಗಳಿಸಬಹುದು ಎಂದು ತಲೆಗೆ ಹುಳ ಬಿಟ್ಟಿದ್ದ. ಇದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗುತ್ತಿದೆ.

ಲವರ್ ಕೊಟ್ಟ ಐಡಿಯಾ :
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ, ಈ ಯುವಕ ತನ್ನ ಗೆಳತಿ ಮಹಾ ಕುಂಭದಲ್ಲಿ ಹಲ್ಲುಜ್ಜಲು ಬೇವಿನ ಕಡ್ಡಿ ಮಾರಾಟ ಮಾಡಲು ಸೂಚಿಸಿದ್ದಳು ಎಂದು ಹೇಳಿದ್ದಾನೆ. ಅಲ್ಲದೆ ಈ ಸಲಹೆಯನ್ನು ಪಾಲಿಸಿ ಈಗ ನಾನು ದಿನಕ್ಕೆ 9-10 ಸಾವಿರ ರೂಪಾಯಿಗಳನ್ನು ಸುಲಭವಾಗಿ ಗಳಿಸುತ್ತಿದ್ದೇನೆ. ನಾನು ಇನ್ನಷ್ಟು ಶ್ರಮ ಹಾಕಿದರೆ ಸುಲಭವಾಗಿ ನಾನು 15ರಿಂದ 20 ಸಾವಿರ ರೂವರೆಗೂ ಗಳಿಸಬಹುದು ಎಂದು ಹೇಳಿದ್ದಾನೆ.

Comments are closed.