Monalisa : 10 ದಿನದಲ್ಲಿ 10 ಕೋಟಿ ಸಂಪಾದಿಸಿದ್ಲಾ ಕುಂಭಮೇಳದ ಸುಂದರಿ ಮೊನಾಲಿಸಾ?

Share the Article

Monalisa : ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಆಗಮಿಸಿರುವ ಕೋಟ್ಯಂತರ ಮಂದಿಯ ನಡುವೆ, ರುದ್ರಾಕ್ಷಿ ಸರ ಮಾರಾಟ ಮಾಡುತ್ತಿದ್ದ 16 ವರ್ಷದ ಹುಡುಗಿ ಮೊನಾಲಿಸಾ(Monalisa )ಎಲ್ಲರನ್ನು ತನ್ನತ್ತ ಸೆಳೆಯುವ ಮೂಲಕ ರಾತ್ರೋ ರಾತ್ರಿ ಇಡೀ ದೇಶದ ಗಮನ ಸೆಳೆದಿದ್ದಳು. ಸೋಷಿಯಲ್‌ ಮೀಡಿಯಾಗಳಲ್ಲಿ ಈಕೆಯದ್ದೇ ಕಾರುಬಾರು. ಬ್ಲಾಗರ್ಗಳು ಹಾಗೂ ರೈಲ್ ಹುಚ್ಚರ ಹಾವಳಿಯಿಂದಾಗಿ ಕೆಲವು ದಿನಗಳ ಹಿಂದೆ ಮೊನಾಲಿಸಾ ಕುಂಭಮೇಳದಿಂದ ಹೊರ ನಡೆದಿದ್ದಳು. ಆದರೆ ಈಗ ಅಚ್ಚರಿ ಎಂಬಂತೆ 10 ದಿನಗಳ ಕಾಲ ರುದ್ರಾಕ್ಷಿ ಮಾರುತ್ತಿದ್ದ ಮೊನಾಲಿಸಾ 10 ಕೋಟಿ ರೂಪಾಯಿ ಸಂಪಾದನೆ ಮಾಡಿದ್ದಾರೆ ಅನ್ನೋ ಸುದ್ದಿ ವೈರಲ್ ಆಗಿದೆ.

ಹೌದು, ಮೊನಾಲಿಸಾ ಕೇವಲ 10 ದಿನದಲ್ಲಿ 10 ಕೋಟಿ ರೂಪಾಯಿ ಗಳಿಸಿದ ಸುದ್ದಿ ವೈರಲ್ ಆಗಿದ್ದು, ಕೆಲವು ರಾಷ್ಟ್ರೀಯ ಮಾಧ್ಯಮಗಳು ಫ್ಯಾಕ್ಟ್‌ ಚೆಕ್‌ಗೆ ಮುಂದಾಗಿವೆ. ಮೊನಾಲಿಸಾ ಕಣ್ಣುಗಳನ್ನು ನೋಡಿದವರು ಅವಳ ಬಳಿ ಹೋಗಿ ಹೂಮಾಲೆಗಳನ್ನ ಕೊಂಡುಕೊಳ್ಳುವ ಬದಲು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದೇ ಹೆಚ್ಚು. ಹೀಗಿರುವಾಗ 10 ಕೋಟಿ ರೂಪಾಯಿ ಹೂಮಾಲೆಗಳು ಮಾರಾಟ ಆಗಿದ್ಯಾ ಅನ್ನೋದು ಅಚ್ಚರಿಯ ವಿಷಯವಾಗಿದೆ.

ಆದ್ರೆ ಮೊನಾಲಿಸಾ ಈ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾಳೆ. 10 ಕೋಟಿ ರೂಪಾಯಿ ಸಿಕ್ಕಿರುವ ಕುರಿತು ಪ್ರತಿಕ್ರಿಯಿಸಿರುವ ಆಕೆ, ‘ನನಗೆ ಅಷ್ಟೊಂದು ದೊಡ್ಡ ಮೊತ್ತ ಸಿಕ್ಕಿದ್ದರೆ ನಾನ್ಯಾಕೆ ಇಲ್ಲಿ ಇನ್ನೂ ರುದ್ರಾಕ್ಷಿ ಮಾರಾಟ ಮಾಡುತ್ತಿದ್ದೆ. ಮನೆಯವರ ಜೊತೆಗೆ ಊರಿನಲ್ಲಿ ಇರುತ್ತಿದ್ದೆ. ನಮಗೆ ಯಾವ ಹಣವೂ ಸಿಕ್ಕಿಲ್ಲ ಎಂದು ಆಕೆ ಹೇಳಿಕೊಂಡಿದ್ದಾಳೆ.

Comments are closed.