Sunil Kumar: ದಿಢೀರ್ ಎಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಿಜೆಪಿ ಶಾಸಕ ಸುನಿಲ್ ಕುಮಾರ್!! ಮುಂದಿನ ನಡೆ ಏನು?

Sunil Kumar : ಬಿಜೆಪಿ ಶಾಸಕ ಹಾಗೂ ಬಿಜೆಪಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಸುನಿಲ್ ಕುಮಾರ್(Sunil Kumar)ಅವರು ದಿಡೀರ್ ಎಂದು ತಮ್ಮ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆಯನ್ನು ನೀಡಿದ್ದಾರೆ. ಈ ಬೆನ್ನಲ್ಲೇ ಅವರ ಮುಂದಿನ ನಡೆ ಕುರಿತು ಭಾರಿ ಚರ್ಚೆಯಾಗುತ್ತಿದೆ.

 

ಹೌದು, ರಾಜ್ಯದಲ್ಲಿ ಬಿಜೆಪಿಯ ಒಳ ಜಗಳ ಜೋರಾಗಿದೆ. ಬಿವೈ ವಿಜಯೇಂದ್ರ ಮತ್ತು ಯತ್ನಾಳ್ ಬಣಗಳ ಕೋಪಾವೇಶ ತಾರಕಕ್ಕೇರಿದೆ. ಮಾಧ್ಯಮಗಳ ಮುಂದೆ ಬಿಜೆಪಿ ನಾಯಕರು ಬಾಯಿಗೆ ಬಂದಂತೆ ಬೈದಾಡಿಕೊಳ್ಳುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆಯೇ ಶಾಸಕ ಸುನಿಲ್ ಕುಮಾರ್ ಅವರು ತಮ್ಮ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ ತಮ್ಮ ರಾಜೀನಾಮೆಗೆ ಯಾವ ಕಾರಣವನ್ನು ಕೂಡ ಅವರು ನೀಡದಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

 

ಅಂದಹಾಗೆ ಸುನಿಲ್ ಕುಮಾರ್ ಅವರು ವಿಜೇಂದ್ರ ಹಾಗೂ ಯತ್ನಾಳ್ ಅವರ ಬಣಗಳಲ್ಲಿ ಗುರುತಿಸಿಕೊಳ್ಳದೆ ತಟಸ್ಥ ಧೋರಣೆ ತಳೆದಿದ್ದರು. ಮತ್ತು ಎರಡೂ ಬಣಗಳಿಂದ ಸಮಾನ ಅಂತರ ಕಾಯ್ದುಕೊಂಡಿದ್ದರು. ಇದು ಸುನಿಲ್ ಕುಮಾರ್ ಅವರಿಗೆ ಒಳಿತಾಯಿತು ಎಂಬುದಾಗಿ ಹಲವರು ವಿಶ್ಲೇಷಿಸುತ್ತಿದ್ದಾರೆ. ಯಾಕೆಂದರೆ ಇದೀಗ ರಾಜ್ಯ ಬಿಜೆಪಿ ಅಧ್ಯಕ್ಷರ ಹುದ್ದೆಗೆ ಚುನಾವಣೆ ನಡೆಯುವ ಕಾರಣ ಸುನಿಲ್ ಕುಮಾರ್ ಅವರು ಇದರಲ್ಲಿ ಸ್ಪರ್ಧಿಸಬಹುದು ಎಂದು ಅಂದಾಜಿಸಲಾಗಿದೆ. ಎರಡು ಬಣಗಳಲ್ಲಿ ಕಾಣಿಸಿಕೊಳ್ಳದ ನಾಯಕನಿಗೆ ಈ ಅದೃಷ್ಟ ವಲಿಯಬಹುದು ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.

Comments are closed.