Karwar: ಗರ್ಭ ಧರಿಸಿದ್ದ ಹಸುವಿನ ತಲೆ ಕಡಿದು ದೇಹ ಕೊಂಡೊಯ್ದ ಕಿಡಿಗೇಡಿಗಳು

Share the Article

Karwar: ಹಸುಗಳ ಮೇಲೆ ಕ್ರೂರತನ ಮೆರೆಯುವ ಪ್ರಕರಣಗಳು ಹೆಚ್ಚುತ್ತಿರುವ ಘಟನೆಗಳು ನಡೆಯುತ್ತಿರುವ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಗರ್ಭ ಧರಿಸಿದ್ದ ಹಸುವಿನ ತಲೆ ಕಡಿದು ದೇಹ ಕೊಂಡೊಯ್ದಿರುವ ಪ್ರಕರಣ ಬೆಳಕಿಗೆ ಬಂದಿದೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸಾಲ್ಕೋಡು ಗ್ರಾಮದಲ್ಲಿ ಕೃಷ್ಣ ಆಚಾರಿ ಎಂಬುವವರಿಗೆ ಸೇರಿದ ಹಸುವಿನ ತಲೆಯನ್ನು ಕಡಿದು ಅದರ ದೇಹ ಕೊಂಡೊಯ್ದಿರುವ ಘಟನೆ ನಡೆದಿದೆ. ಮೇಯಲೆಂದು ಹೋಗಿರುವ ಹಸು ರಾತ್ರಿಯಾದರೂ ವಾಪಸ್‌ ಬರದೇ ಇರುವ ಕಾರಣ ಇಂದು (ಜ.19) ರಂದು ಕೃಷ್ಣ ಆಚಾರಿ ಯವರು ಹುಡುಕಾಟ ಮತ್ತೆ ಪ್ರಾರಂಭ ಮಾಡಿದ್ದಾರೆ. ಈ ಸಮಯದಲ್ಲಿ ಅವರಿಗೆ ಹಸುವಿನ ರಕ್ತ, ಕಾಲು, ರುಂಡ ಪತ್ತೆಯಾಗಿದೆ.

ಇದನ್ನು ಕಂಡು ಕೃಷ್ಣ ಆಚಾರಿ ಅವರು ಆಘಾತಕ್ಕೊಳಗಾಗಿದ್ದಾರೆ. ಅಲ್ಲದೇ ಹಸು ಗರ್ಭ ಧರಿಸಿದ್ದು, ದುರುಳರು ಈ ರೀತಿ ಹಿಂಸೆ ನೀಡಿದ್ದು ಕಂಡು ಶಾಕ್‌ಗೊಳಗಾಗಿದ್ದಾರೆ.

Comments are closed.