Kota; ಎರಡೂವರೆ ತಿಂಗಳ ಮಗುವಿಗೆ ಇಂಜೆಕ್ಷನ್‌; ನಂತರ ಬಂದ ಜ್ವರ, ಮಗು ಸಾವು

Kota: ನಿನ್ನೆ (ಜ.13) ಎರಡೂವರೆ ತಿಂಗಳ ಮಗುವೊಂದು ಇಂಜೆಕ್ಷನ್‌ ಹಾಕಿಸಿದ ಬಳಿಕ ತೀವ್ರ ಅಸ್ವಸ್ಥಗೊಂಡು ಸಾವನ್ನಪ್ಪಿರುವ ಘಟನೆಯೊಂದು ಯಡಾಡಿ-ಮತ್ಯಾಡಿಯ ನಾಲ್ತೂರು ಗುಡ್ಡೆಯಂಗಡಿಯಲ್ಲಿ ನಡೆದಿದೆ.

 

ಗುರುರಾಜ್‌ ಎಂಬುವವರ ಎರಡೂವರೆ ತಿಂಗಳ ಗಂಡು ಮಗುವಿಗೆ ಜ.10ರಂದು ಇಂಜೆಕ್ಷನ್‌ನನ್ನು ನೀಡಲಾಗಿತ್ತು. ಆದರೆ ಸಂಜೆ ಸಮಯದಲ್ಲಿ ಮಗುವಿಗೆ ಜ್ವರ ಕಾಣಿಸಿಕೊಂಡಿದ್ದು, ಔಷಧ ನೀಡಿದಾಗ ಸ್ವಲ್ಪ ಕಡಿಮೆ ಆಗಿದೆ. ಜ.13 ರಂದು ಮತ್ತೆ ಜ್ವರ ಉಲ್ಭಣಿಸಿದ್ದು ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದಾರೆ. ಆದರೆ ಮಗು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ.

ಈ ಘಟನೆ ಕುರಿತು ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed, but trackbacks and pingbacks are open.