Putturu : ಮಹಿಳೆಯ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣ – ಆರೋಪಿ ಮೊಹಮ್ಮದ್‌ ಶರೀಫ್‌ ನನ್ನು ದೋಷ ಮುಕ್ತಗೊಳಿಸಿ ಬಿಡುಗಡೆಗೊಳಿಸಿದ ಕೋರ್ಟ್

Share the Article

Putturu : ಸುಮಾರು 9 ವರ್ಷಗಳ ಹಿಂದೆ ಮಹಿಳೆಯನ್ನು ಅತ್ಯಾಚಾರ ಮಾಡಲು ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪುತ್ತೂರು ನ್ಯಾಯಾಲಯ ತೀರ್ಪನ್ನು ಪ್ರಕಟಿಸಿದ್ದು ಆರೋಪಿಯನ್ನು ದೋಷ ಮುಕ್ತಗೊಳಿಸಿದೆ.

2015ರ ಡಿಸೆಂಬರ್‌ನಲ್ಲಿ ಕಡಬ(Kadaba) ತಾಲೂಕಿನ ಮರ್ದಾಳದಲ್ಲಿ ಮಹಿಳೆಯೊರ್ವರ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಆಕೆಯ ಮಕ್ಕಳ ಸಮ್ಮುಖದಲ್ಲಿ ಆಕೆಯ ಮಾನಭಂಗಕ್ಕೆ ಪ್ರಯತ್ನಿಸಿ ಕೊಲ್ಲುವುದಾಗಿ ಬೆದರಿಸಿದ ಆರೋಪದಲ್ಲಿ ಮೊಹಮ್ಮದ್‌ ಶರೀಫ್‌ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಯನ್ನು ಕೈಗೆತ್ತಿಕೊಂಡ ಪುತ್ತೂರು ನ್ಯಾಯಾಲಯ ಆರೋಪಿಯನ್ನು ದೋಷ ಮುಕ್ತಗೊಳಿಸಿ ಬಿಡುಗಡೆಗೊಳಿಸಿದೆ.

ಅಂದಹಾಗೆ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯು ಕೊಣಾಲು ಗ್ರಾಮದ ಕೋಲ್ಪೆಗೆ ತನ್ನನ್ನು ಕರೆಸಿಕೊಂಡು ತನ್ನ ಮೇಲೆ ಹಲ್ಲೆ ನಡೆಸಿ ಅದನ್ನು ಮರೆಮಾಚಲು ಈ ರೀತಿ ಸುಳ್ಳು ದೂರು ನೀಡಿರುವುದಾಗಿ ಆರೋಪಿಸಿ ದೂರುದಾರೆ ಮಹಿಳೆ ಹಾಗೂ ಅವಳ ಸಂಬಂಧಿಕರಾದ ಕೋಲ್ಪೆ ನಿವಾಸಿಗಳ ವಿರುದ್ಧ ಆರೋಪಿಯು ಪ್ರತಿ ದೂರನ್ನು ಕೂಡ ದಾಖಲಿಸಿದ್ದರು. ಆರೋಪಿಯ ಪರವಾಗಿ ನ್ಯಾಯವಾದಿ ನೂರುದ್ದೀನ್‌ ಸಾಲ್ಮರ, ಹರೀಶ್‌ ಕುಮಾರ್‌ಎಂ ಮತ್ತು ಸಾತ್ವಿಕ್‌ ಆರಿಗ ಬಿ. ವಾದಿಸಿದ್ದರು.

Comments are closed.