BBK 11: ಹರಕೆಯ ಕುರಿಯಾದ ಧನರಾಜ್! ಗೆಳತಿಗಾಗಿ ಓರ್ವ ಪ್ರತಿಭಾವಂತ ಅಟಗಾರನನ್ನು ಹೊರಗಿಟ್ಟ ಮಂಜು
BBK11: ಬಿಗ್‌ಬಾಸ್ ಕನ್ನಡ ಸೀಸನ್ 11 ದಿನಕ್ಕೊಂದು ಹೊಸ ಟ್ವಿಸ್ಟ್‌ನೊಂದಿಗೆ ಬರುತ್ತಿದೆ. ಒಂಭತ್ತು ಸ್ಪರ್ಧಿಗಳು ಇದ್ದು, ಫಿನಾಲೆ ಟು ಟಿಕೆಟ್ ಆಟ ಜೋರಾಗಿ ನಡೆಯುತ್ತಿದೆ. ಚೈತ್ರಾರನ್ನು ಫಿನಾಲೆ ಟಿಕೆಟ್ ಆಟದಿಂದ ಹೊರಗಿಟ್ಟ ಮಂಜು ತಂಡ, ಇದೀಗ ಧನರಾಜ್ ಅವರಿಗೂ ಶಾಕ್ ನೀಡಿದೆ.
ಧನರಾಜ್ ಮೊದಲಿನಿಂದಲೂ ಎಲ್ಲರ ಜೊತೆ ಚೆನ್ನಾಗಿ ಆಟ ಆಡಿಕೊಂಡು, ಕೊಟ್ಟ ಟಾಸ್ಕ್‌ನಲ್ಲಿ ಕೂಡಾ ತನ್ನ ಶಕ್ತಿಮೀರಿ ಪ್ರಯತ್ನ ಮಾಡುವುದು ವೀಕ್ಷಕರಿಗೆ ತಿಳಿದಿದೆ. ಆದರೆ ಇಂದು ರಿಲೀಸ್ ಆದ ಪ್ರೊಮೋದಲ್ಲಿ ಧನರಾಜ್ ಅವರನ್ನು ಫೈನಲ್ ಗೆ ಅನರ್ಹ ಎಂದು ಹೇಳಿ ಸಹ ಆಟಗಾರರಾದ ಗೆಳೆಯ ಮಂಜು, ಗೆಳತಿ ಗೌತಮಿ ತೀರ್ಮಾನ ಮಾಡಿದ್ದಾರೆ.
View this post on Instagram
ಬಿಗ್‌ಬಾಸ್ ಮನೆಗೆ ಬಂದಾಗ ಮೊದಲ ಮೂರು ವಾರ ಇದ್ದ ರೀತಿಯನ್ನು ಪರಿಗಣಿಸಿ ಗೌತಮಿ ಕಾರಣ ನೀಡಿದರೆ, ಮಂಜು ಗೌತಮಿಗಿಂತ ಧನರಾಜ್ ಕಡಿಮೆ ಎನ್ನುವ ರೀತಿಯಲ್ಲಿ ಕಾರಣ ನೀಡಿ, ಫಿನಾಲೆ ಟು ಟಿಕೆಟ್ ನಿಂದ ಹೊರಗಿಟ್ಟಿದ್ದಾರೆ. ಇದಕ್ಕೆ ಉಳಿದ ಆಟಗಾರರು ಧನರಾಜ್ ಹರಕೆಯ ಕುರಿ ಎಂದು ಹೇಳಿ ನಗುತ್ತಿರುವುದು ಕಂಡು ಬಂದಿದೆ.
ಮಂಜು ಈ ಮೊದಲೇ ಹೇಳಿದಾಗೆ, ಫಿನಾಲೆವರೆಗೂ ನಾವಿಬ್ಬರೂ ಅಂದರೆ ಗೌತಮಿ, ಮಂಜು ಹೋಗಬೇಕೆನ್ನುವುದು ನನ್ನ ಆಸೆ. ಈ ನಿಟ್ಟಿನಲ್ಲಿ ನನ್ನ ಆಟ ಇರುತ್ತದೆ ಎಂದು ಹೇಳಿದ್ದರು. ಎಲ್ಲರ ಎದುರು ನನ್ನ ಆಟ ನನ್ನ ಆಟ ಎಂದು ಹೇಳುವ ಮಂಜು ಗೌತಮಿಯ ಸ್ನೇಹ ಪಾಶದಿಂದ ಇನ್ನೂ ಹೊರಗೆ ಬರದೇ, ಆಟವನ್ನು ಆಟದ ರೀತಿ ಆಡದೆ ಕೇವಲ ತನ್ನ ಗೆಳತಿಗಾಗಿ ಓರ್ವ ಪ್ರತಿಭಾವಂತ ಆಟಗಾರನನ್ನು ಹೊರಗಿಟ್ಟಿರುವುದು ಎಷ್ಟು ಸರಿ?
ವ್ಯಕ್ತಿತ್ವದ ವಿಚಾರದಲ್ಲಿ ತ್ರಿವಿಕ್ರಮ್ ಅವರಿಗೆ ಸ್ಪೀಚ್ ನೀಡುವ ಮಂಜು ತಮ್ಮ ವ್ಯಕ್ತಿತ್ವವನ್ನು ಗೌತಮಿಗೋಸ್ಕರ ಚೇಂಜ್ ಮಾಡುವ ಪರಿಪಾಠ ಇಟ್ಟುಕೊಂಡಿದ್ದಾರೆ ಎನ್ನುವುದು ಈ ಪ್ರೋಮೋದಲ್ಲಿ ಕಾಣಬಹುದು.
ಅಂತೂ ಧನರಾಜ್ ಅವರನ್ನು ಫಿನಾಲೆ ಟಿಕೆಟ್‌ನಿಂದ ಮಂಜು ಗೆಳೆಯ, ಗೌತಮಿ ಗೆಳತಿ ಹೊರಗಿಟ್ಟಿದ್ದು, ವೀಕ್ಷಕರ ಮನಸ್ಸಿನಲ್ಲಿ ಪ್ರಶ್ನೆ ಮೂಡಿಸಿರುವುದು ಎದ್ದು ಕಂಡು ಬಂದಿದೆ. ಅದೇನೇ ಇದ್ದರೂ ಆಟದಿಂದ ಹೊರಗುಳಿದ ಧನರಾಜ್ ಮುಖದಲ್ಲಂತೂ ಬೇಸರ ಕಂಡು ಬಂದಿರುವುದು ನಿಜ.
ಹರಕೆಯ ಕುರಿಯಾದ ಧನರಾಜ್ ನಾಮಿನೇಟ್ ಕೂಡಾ ಆಗಿದ್ದಾರೆ. ಗೆಳತಿಗಾಗಿ ಮಂಜು ತಗೊಂಡ ನಿರ್ಧಾರ ಇದು ಎನ್ನುವುದು ಎದ್ದು ಕಾಣುತ್ತಿದ್ದು, ಈ ರೀತಿಯ ಆಟ ಆಡಿದರೆ ವೀಕ್ಷಕರು ಕೈ ಹಿಡಿಯುತ್ತಾರೆ ಎನ್ನುವುದು ಬಹುಶಃ ಮನೆಯ ಸದಸ್ಯರಾದ ಮಂಜು, ಗೌತಮಿಗೆ ತಿಳಿದಿಲ್ಲವೇನೋ ಅನಿಸುತ್ತದೆ.
Comments are closed, but trackbacks and pingbacks are open.