Tirupati : ಕಾಲ್ತುಳಿತದಲ್ಲಿ 6 ಮಂದಿ ಭಕ್ತರು ಸಾವು – ರಾಜಕಾರಣಿಗಳು ಮಾಡಿದ ಆ ಒಂದು ತಪ್ಪಿಗೆ ಶಾಪ ಕೊಟ್ಟನೇ ತಿಮ್ಮಪ್ಪ?

Tirupati: ತಿರುಪತಿಯಲ್ಲಿ ಇದೇ ಮೊದಲ ಬಾರಿಗೆ ವ್ಯಾಪಕ ಕಾಲ್ತುಳಿತ ಸಂಭವಿಸಿ ಕರ್ನಾಟಕದ ಮೂಲದ ಓರ್ವ ಮಹಿಳೆ ಸೇರಿದಂತೆ ಬರೊಬ್ಬರಿ 6 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಹೌದು, ವೈಕುಂಠ ದ್ವಾರ ದರ್ಶನ ಟೋಕನ್ ವಿತರಣಾ ಕೇಂದ್ರಗಳಲ್ಲಿ ಕಾಲ್ತುಳಿತ ಸಂಭವಿಸಿದ್ದು, ಈ ವೇಳೆ ಈ ದುರ್ಘಟನೆ ನಡೆದಿದೆ.

 

ಟೋಕನ್‌ಗಾಗಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಸರತಿ ಸಾಲಿನಲ್ಲಿ ಹೋಗುವಾಗ ಮಾತಿನ ಚಕಮಕಿ ನಡೆದಿದ್ದು, ಇದೇ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿದೆ ಎನ್ನಲಾಗಿದೆ. ಈ ಬೆನ್ನಲ್ಲೇ ಸರ್ಕಾರವೂ ಕೂಡ ಸಾವನ್ನಪ್ಪಿರುವ ಭಕ್ತರ ಮನೆಗೆ ಸುಮಾರು 25 ಲಕ್ಷ ಪರಿಹಾರವನ್ನು ಘೋಷಿಸಿದೆ. ಈ ಬೆನ್ನಲ್ಲೇ ಇದು ತಿಮ್ಮಪ್ಪನ ಶಾಪ ಎಂದು ಜನರು ವಿಶ್ಲೇಷಿಸುತ್ತಿದ್ದಾರೆ.

ಹೌದು, ಕಾಲ್ತುಳಿತದಿಂದ ಆರೋ ಭಕ್ತರು ಸಾವನ್ನಪ್ಪಿದ ಘಟನೆಯನ್ನು ಕೆಲವರು ಇದು ತಿಮ್ಮಪ್ಪನ ಶಾಪ ಎನ್ನುತ್ತಿದ್ದಾರೆ. ಮೋಕ್ಷ ಸಿಗಲಿ ಎನ್ನುವ ಉದ್ದೇಶಕ್ಕೇ ವೈಕುಂಠ ದ್ವಾರದ ದರ್ಶನ ಪಡೆಯುತ್ತಾರೆ. ವಿಪರ್ಯಾಸವೆಂದರೆ ಈ ದ್ವಾರ ದರ್ಶನಕ್ಕೆ ಟಿಕೆಟ್ ಖರೀದಿ ಮಾಡುವ ಹೊತ್ತಿನಲ್ಲೇ ಈ 6 ಮಂದಿ ಸಾವನ್ನಪ್ಪಿದ್ದಾರೆ. ಇದೆಲ್ಲಾ ತಿಮ್ಮಪ್ಪನ ಕೋಪ ಎಂದು ಜನರು ಸೋಷಿಯಲ್ ಮೀಡಿಯಾದಲ್ಲಿ ಹೇಳುತ್ತಿದ್ದಾರೆ.

ಜಗನ್ ರೆಡ್ಡಿ ಸಿಎಂ ಆಗಿದ್ದಾಗ ತಿರುಪತಿ ತಿಮ್ಮಪ್ಪನ ಪ್ರಸಾದ ರೂಪದಲ್ಲಿ ನೀಡುತ್ತಿದ್ದ ಲಡ್ಡುಗೆ ಪ್ರಾಣಿಗಳ ಕೊಬ್ಬು ಬೆರೆಸಲಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿತ್ತು. ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ಇಂತಹ ಅನೇಕ ಅವ್ಯವಹಾರಗಳು ನಡೆಯುತ್ತಿತ್ತು. ಈ ವಿಚಾರಗಳು ರಾಜಕೀಯವಾಗಿ ಸಾಕಷ್ಟು ಸದ್ದು ಮಾಡಿತ್ತು. ತಿಮ್ಮಪ್ಪನಿಗೆ ಮಾಡಿದ ಈ ಅಪಚಾರಗಳೇ ನಿನ್ನೆ ನಡೆದ ದುರಂತಕ್ಕೆ ಒಂದು ಕಾರಣ ಎಂದು ಸಾರ್ವಜನಿಕರು ಅಭಿಪ್ರಾಯಪಡುತ್ತಿದ್ದಾರೆ.

Comments are closed, but trackbacks and pingbacks are open.