Naxalite demands: ಶರಣಾಗುತ್ತಿರುವ ನಕ್ಸಲೆಟ್ ಗಳು ಸರ್ಕಾರಕ್ಕೆ ಇಟ್ಟ ಬೇಡಿಕೆಗಳೇನು?

Naxalite demands: ಸಮಾಜದ ಮುಖ್ಯ ವಾಹಿನಿಗೆ ಬರಲು ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಆರು ಮಂದಿ ನಕ್ಸಲರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಪರಮೇಶ್ವರ್ ಅವರ ಮುಂದೆ ಶರಣಾಗಲಿದ್ದಾರೆ.

 

ಹೌದು, ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಕರ್ನಾಟಕದ ಮರೆಪ್ಪ ಅರೋಲಿ, ತಮಿಳುನಾಡಿನ ಕೆ ವಸಂತ್ ಮತ್ತು ಕೇರಳದ ಜೀಶಾ ಶರಣಾಗತಿಯಾಗಲಿದ್ದಾರೆಂದು ಮೂಲಗಳು ತಿಳಿಸಿವೆ. ಸದ್ಯ ಶರಣಾಗತಿ ಆಗುತ್ತಿರುವ ನಕ್ಸಲ್ ಗಳಿಗೆ ಸರ್ಕಾರವು ಭರ್ಜರಿ ಪ್ಯಾಕೇಜ್ ಘೋಷಿಸಿದೆ. ಇ ಮುಖ್ಯವಾಹಿನಿಗೆ ಬರುತ್ತಿರುವ ನಕ್ಸಲೆಟ್ ಗಳ ಬೇಡಿಕೆಗಳು ಏನು ಗೊತ್ತಾ?

ನಕ್ಸಲೆಟ್ ಗಳ ಬೇಡಿಕೆಗಳು:
* ಸಮಾಜದ ಮುಖ್ಯವಾಹಿನಿಗೆ ಬಂದ ನಕ್ಸಲರ ಆತ್ಮಗೌರವಕ್ಕೆ ಧಕ್ಕೆಯಾಗಬಾರದು
* ಪ್ರಜಾತಾಂತ್ರಿಕ ಹೋರಾಟಕ್ಕೆ ಯಾವುದೇ ತೊಡಕಾರಬಾರದು
* ಸಂಬಂಧ ಇಲ್ಲದಿದ್ದರೂ ಹೆಸರು ಇರೋ ಪ್ರಕರಣದಿಂದ ಕೈಬಿಡಬೇಕು
* ಬೇಗ ಜಾಮೀನಿನ ಬರಲು ಸಹಕರಿಸಬೇಕು
* ವಿಶೇಷ ನ್ಯಾಯಾಲಯದಲ್ಲಿ ಮೊಕದ್ದಮೆ ಇತ್ಯರ್ಥಕ್ಕೆ ಸಹಕರಿಸಬೇಕು
* ಕೌಶಲ ತರಬೇತಿಗೆ ಸಹಕಾರ ನೀಡಬೇಕು, ಕೊಟ್ಟ ಮಾತು ಉಳಿಸಿಕೊಳ್ಳಬೇಕು
* ಸರ್ಕಾರಗಳು ನಕ್ಸಲರ ಬಗ್ಗೆ ಅನುಕಂಪದಿಂದ ವರ್ತಿಸಬೇಕು

* ಈ ಹಿಂದೆ ಸಮಾಜದ ಮುಖ್ಯವಾಹಿನಿಗೆ ಬಂದಿರುವ ಎಲ್ಲಾ ನಕ್ಸಲರಿಗೂ ಮಾತು ಕೊಟ್ಟ ಸರ್ಕಾರ ಎಲ್ಲಾ ಸೌಲಭ್ಯಗಳನ್ನ ನೀಡಬೇಕು
* ಸಮಾಜದ ಮುಖ್ಯವಾಹಿನಿಗೆ ಬಂದ ನಂತರ ಗೌರವದಿಂದ ನೋಡಬೇಕು
* ಪ್ರಜಾತಾಂತ್ರಿಕ ವ್ಯವಸ್ಥೆಯ ಹೋರಾಟದಲ್ಲಿರುವಾಗ ಅನುಮಾನದಿಂದ ನೋಡುವಂತಾಗಬಾರದು

Comments are closed, but trackbacks and pingbacks are open.