Tirupati: ತಿರುಪತಿಯಲ್ಲಿ ಕಾಲ್ತುಳಿತ- ಮೂರು ಭಕ್ತಾಧಿಗಳು ಸಾವು !! ಮನಮಿಡಿಯುವ ವಿಡಿಯೋ ವೈರಲ್

Tirupati: ತಿರುಪತಿಯಲ್ಲಿ ಭಕ್ತಾದಿಗಳ ನಡುವೆ ಕಾಳ್ತುಳಿತ ಉಂಟಾಗಿ ಮೂವರು ಭಕ್ತಾದಿಗಳು ಸ್ಥಳದಲ್ಲಿ ಮೃತಪಟ್ಟ ಮನಮಿಡಿಯುವ ಘಟನೆ ನಡೆದಿದೆ.

 


ಹೌದು, ತಿರುಪತಿಯ(Tirupati) ವಿಷ್ಣು ನಿವಾಸಂನಲ್ಲಿ ಈ ಕಾಲ್ತುಳಿತ ಉಂಟಾಗಿದೆ. ವಿಷ್ಣು ನಿವಾಸಂನಲ್ಲಿ ವೈಕುಂಠದ್ವಾರದ ಸರ್ವದರ್ಶನಂ ಟೋಕನ್ ವಿತರಣೆ ಮಾಡಲಾಗುತ್ತಿತ್ತು. ಈ ವೇಳೆ 4 ಸಾವಿರಕ್ಕೂ ಹೆಚ್ಚು ಭಕ್ತರು ಟಿಕೆಟ್‌ಗಾಗಿ ಮುಗಿಬಿದ್ದ ಕಾರಣ ಕಾಲ್ತುಳಿತ ಸಂಭವಿಸಿ ತಮಿಳುನಾಡಿನ ಸೇಲಂನ ಭಕ್ತನೋರ್ವ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಸದ್ಯ ದೊರೆತ ಮಾಹಿತಿ ಪ್ರಕಾರ  ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿದ್ದು ಈಗ ಆರು ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಕಾಲ್ತುಳಿತಕ್ಕೆ ಸಿಕ್ಕ ಇನ್ನೂ ನಾಲ್ವರು ಅಸ್ವಸ್ಥರಾಗಿದ್ದು, ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ರುಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

Comments are closed, but trackbacks and pingbacks are open.