Putturu : ಅಕ್ರಮ-ಸಕ್ರಮ ಅರ್ಜಿ ವಿಲೇವಾರಿಗೆ ಪುತ್ತೂರು ಶಾಸಕ ಅಶೋಕ್ ರೈ ಯಿಂದ ಹೊಸ ರೂಲ್ಸ್ ಜಾರಿ ?! ಭಾರೀ ಆಕ್ರೋಶ
Putturu : ಪುತ್ತೂರು ಶಾಸಕ ಅಶೋಕ್ ರೈ(Ashok Rai) ಅವರು ಅಕ್ರಮ-ಸಕ್ರಮ ಅರ್ಜಿ ವಿಲೇವಾರಿಗೆ ತಮ್ಮದೇ ಆದಂತಹ ಹೊಸ ರೂಲ್ಸ್ ಅನ್ನು ಮಾಡಿಕೊಂಡಂತಿದೆ. ಯಸ್, ಅರ್ಜಿ ವಿಲೇವಾರಿಗೆ ಕಾಂಗ್ರೇಸ್ ಪಕ್ಷದ ಮುಖಂಡರ ಶಿಫಾರಸ್ಸು ಪತ್ರ ಕೇಳಿದ ಅವರ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹೌದು, ವೈರಲ್ ಆದ ವಿಡಿಯೋದಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಕಛೇರಿಯಲ್ಲಿ ನಡೆದ ಅಕ್ರಮ-ಸಕ್ರಮದ ಸಿಟ್ಟಿಂಗ್ ವೇಳೆ ಆಗಮಿಸಿದ ವ್ಯಕ್ತಿಯೊಬ್ಬರ ಹತ್ತಿರ ಎಷ್ಟು ವರ್ಷ ಆಗಿದೆ , ಅಕ್ರಮ ಸಕ್ರಮ ಮಾಡಲು ಎಷ್ಟು ಹಣ ಕೇಳಿದ್ದಾರೆ ಎಂದು ವಿಚಾರಿಸಿದ್ದಾರೆ. ಅಲ್ಲದೆ ಯಾರಾದರೂ ಬರೆದುಕೊಟ್ಟಿದ್ದಾರಾ ಎಂದು ಕೇಳಿದ ಶಾಸಕರು ಪಕ್ಷದವರ ಶಿಫಾರಸು ಇದೆಯಾ ಎಂದು ಅರ್ಜಿಯಲ್ಲಿ ಹುಡುಕಾಡಿದ್ದಾರೆ. ಬಳಿಕ ವ್ಯಕ್ತಿ ಹತ್ತಿರ ಮತ ಹಾಕಬೇಕು ಎಂದು ಕೇಳಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಬೆನ್ನಲ್ಲೇ ಶಾಸಕ ಅಶೋಕ್ ರೈ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದ್ದು ಶಾಸಕ ಅಶೋಕ್ ರೈ ಅವರು ಆಡಳಿತ ಪಕ್ಷದ ಮುಖಂಡರು ಸಹಿ ಮಾಡಿದ ಅರ್ಜಿಗಳಿಗೆ ಮನ್ನಣೆ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
Comments are closed, but trackbacks and pingbacks are open.