Kiccha Sudeep ವಿರುದ್ಧ ರೊಚ್ಚಿಗೆದ್ದ ಕನ್ನಡಿಗರು!! ಕಾರಣ?

Kiccha Sudeep : ಜೀ ಕನ್ನಡದ ಸರಿಗಮಪ ಶೋಗೆ ಚಂದನವನದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಫ್ಯಾಮಿಲಿ ಎಂಟ್ರಿ ಕೊಟ್ಟಿದ್ದು ವೀಕ್ಷಕರನ್ನೆಲ್ಲ ಮನರಂಜಿಸಿತ್ತು. ಆದರೆ ಈ ಬೆನ್ನಲ್ಲೇ ಕಿಚ್ಚ ಸುದೀಪ್ ವಿರುದ್ಧ ಕನ್ನಡಿಗರು ರೊಚ್ಚಿಗೆದ್ದಿದ್ದಾರೆ. ಅವರ ಮಗಳು ಸಾನ್ವಿ ಸುದೀಪನ್ನು ಮುಂದಿಟ್ಟುಕೊಂಡು ಟ್ರೋಲ್ ಮಾಡುತ್ತಿದ್ದಾರೆ.

 

ಹೌದು, ಸ್ಯಾಂಡಲ್​ವುಡ್ ನಟ ಕಿಚ್ಚ ಸುದೀಪ್ (Kichha Sudeep)​ ಮ್ಯಾಕ್ಸ್ ಸಿನಿಮಾ (Max Movie) ಸಕ್ಸಸ್​ ಖುಷಿಯಲ್ಲಿದ್ದಾರೆ. ಇಡೀ ಫ್ಯಾಮಿಲಿ ಕೂಡ ಮ್ಯಾಕ್ಸ್​ ಚಿತ್ರದ ಯಶಸ್ಸನ್ನು ಸಂಭ್ರಮಿಸಿತು. ಜೀ ಕನ್ನಡದಲ್ಲಿ ಪ್ರಸಾರವಾಗುವ ಸರಿಗಮಪ ಕಾರ್ಯಕ್ರಮದಲ್ಲಿ ನಟ ಸುದೀಪ್ ಪತ್ನಿ ಪ್ರಿಯಾ (Priya Sudeep) ಹಾಗೂ ಮಗಳು ಸಾನ್ವಿ ಸುದೀಪ್​ (Sanvi Sudeep) ಭಾಗಿಯಾಗಿದ್ರು. ಅಪ್ಪನಿಗಾಗಿ ಮನತುಂಬುವಂತೆ ಹಾಡಿದ ಸಾನ್ವಿ ಗಾಯನ ಕೇಳಿ ಎಲ್ಲರೂ ಚಪ್ಪಾಳೆ ತಟ್ಟಿದ್ರು. ಆದ್ರೆ ಹಾಡಿನ ಬಳಿಕ ಸಾನ್ವಿ ಮಾತನಾಡಿದ್ದನ್ನೆಲ್ಲಾ ಕೇಳಿ ಇಡೀ ಕನ್ನಡಿಗರು ರೊಚ್ಚಿಗೆದ್ದಿದ್ದಾರೆ ಅಲ್ಲದೆ ಅವರನ್ನು ಟ್ರೋಲ್ ಕೂಡ ಮಾಡಿದ್ದಾರೆ.

ಯಸ್, ಜೀ ಕನ್ನಡದ ಸರಿಗಮಪ ಸಂಗೀತಾ ಕಾರ್ಯಕ್ರಮಕ್ಕೆ ಬಂದಿದ್ದ ಸಾನ್ವಿ ಸುದೀಪ್ ಅವರು ಅಪ್ಪನಿಗಾಗಿ ಜಸ್ಟ್ ಮಾತ್ ಮಾತಲ್ಲಿ ಹಾಡನ್ನು ತುಂಬಾ ಚೆನ್ನಾಗಿ ಹಾಡಿದ್ರು. ಸಾನ್ವಿ ಸಂಗೀತಾ ಕೇಳಿದ ಕಾರ್ಯಕ್ರಮದ ಜಡ್ಜ್​ಗಳು ಕೂಡ ಚಪ್ಪಾಳೆ ತಟ್ಟಿ, ಕೊಂಡಾಡಿದ್ರು. ಆದ್ರೆ ಕಾರ್ಯಕ್ರಮದ ಉದ್ದಕ್ಕೂ ಸಾನ್ವಿ ಆಡಿದ ಮಾತುಗಳಲ್ಲಿ ಆಂಗ್ಲ ಪದಗಳೇ ಹೆಚ್ಚಾಗಿತ್ತು. ಹೀಗಾಗಿ ಸಾನ್ವಿ ಸುದೀಪ್ ಫುಲ್ ಟ್ರೋಲ್ ಆಗ್ತಿದ್ದಾರೆ. ಅಲ್ಲದೆ ಕಿಚ್ಚ ಸುದೀಪ್ ಅವರಿಗೆ ಕನ್ನಡದ ಬಗ್ಗೆ ಅತ್ತೆಲ್ಲ ಮಾತನಾಡುತ್ತೀರಿ, ಆದರೆ ನಿಮ್ಮ ಮಗಳಿಗೆ ಕನ್ನಡವನ್ನು ಕಲಿಸಲು ಆಗುವುದಿಲ್ಲವೇ? ಇಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments are closed, but trackbacks and pingbacks are open.