Lockdown: HMPV ಸೋಂಕು ಪ್ರಕರಣ – ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಘೋಷಣೆ?! ಆರೋಗ್ಯ ಸಚಿವರಿಂದ ಬಿಗ್ ಅಪ್ಡೇಟ್

Lockdown: ಚೀನಾದಲ್ಲಿ ಹುಟ್ಟಿಕೊಂಡು ಕೊರೋನಾದಂತೆ ಪ್ರಪಂಚದಾದ್ಯಾಂತ ವ್ಯಾಪಿಸಲು ಸಜ್ಜಾಗಿದೆ ಎನ್ನಲಾದ ಹೆಚ್​​​​​ಎಂಪಿವಿ(HMPV) ಸೋಂಕು ರಾಜ್ಯದಲ್ಲೂ ಕಂಡು ಬಂದಿದ್ದು ಇಬ್ಬರೂ ಮಕ್ಕಳಿಗೆ ಈ ವೈರಸ್ ಅಟ್ಯಾಕ್ ಆಗಿದೆ. ಇದು ರಾಜ್ಯಾದ್ಯಂತ ವ್ಯಾಪಿಸಲಿದೆ ಎನ್ನುವ ಭಯ ಇದೀಗ ಜನರಲ್ಲಿ ಕಾಡುತ್ತಿದೆ. ಈ ಬೆನ್ನಲ್ಲೇ ಮತ್ತೆ ರಾಜ್ಯದಲ್ಲಿ ಲಾಕ್ ಡೌನ್ ಆಗಲಿದೆಯಾ? ಎಂಬ ಆತಂಕ ಕೂಡ ಜನರಲ್ಲಿ ಮನೆ ಮಾಡಿದೆ. ಈಗ ಈ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್( Dinesh Gundu Rao) ಅವರು ಮಹತ್ವದ ಅಪ್ಡೇಟ್ ಒಂದನ್ನು ನೀಡಿದ್ದಾರೆ.

 

ಮಕ್ಕಳಲ್ಲಿ ಈ ಸೋಂಕು ದೃಢಪಟ್ಟ ಕಾರಣ ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಹೆಚ್​​​​​ಎಂಪಿವಿ ಸೋಂಕಿಗೆ ತುತ್ತಾಗಿದ್ದ ಇಬ್ಬರೂ ಮಕ್ಕಳು ಗುಣಮುಖರಾಗಿದ್ದು, ಎಲ್ಲರೂ ಮಾಸ್ಕ್​ ಹಾಕಬೇಕು, ಲಾಕ್​​ಡೌನ್​​ ಮಾಡುವ ಅವಶ್ಯಕತೆ ಇಲ್ಲ. ಈ ವೈರಸ್ ಬಗ್ಗೆ ಸಾರ್ವಜನಿಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ಈ ವೈರಸ್​​​ನಿಂದ ಜೀವಕ್ಕೆ ಏನೂ ಅಪಾಯವಿಲ್ಲ ಎಂದರು.

ಅಲ್ಲದೆ ಚೀನಾದಲ್ಲಿ ಉದ್ಭವಿಸಿರುವ ವೈರಸ್ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸುತ್ತಿದೆ. ಈ ವೈರಸ್ ಹಾನಿಕಾರಕ ಎಂದು ಹೇಳಲು ಸಾಧ್ಯವಿಲ್ಲ. ಬೆಂಗಳೂರಿನಲ್ಲಿ ಎರಡು ಪ್ರಕರಣಗಳು ದೃಢಪಟ್ಟಿರುವ ಸಂಗತಿ ಸಾಮಾನ್ಯವಾಗಿ ಭಯ ಹುಟ್ಟಿಸಿದೆ. ಆದರೆ ಇದು ಮೊದಲ ಪ್ರಕರಣ ಅಲ್ಲ, ILI ಯವರಿಗೆ (Influenza-like Illness) ಬೇರೆ ಬೇರೆ ವೈರಸ್ ಬರುತ್ತದೆ. ಅದರಲ್ಲಿ HMPV ಕೂಡ ಇರುತ್ತದೆ. ಈ ವೈರಸ್ ಬೇರೆ ಬೇರೆ ಸಮಸ್ಯೆಗಳು ಸೇರಿಕೊಂಡು ಬರುತ್ತದೆ ಎಂದು ವಿವರಿಸಿದರು.

Comments are closed, but trackbacks and pingbacks are open.