Hansika Motwani: ನಟಿ ಹನ್ಸಿಕಾ ವಿರುದ್ಧ ಎಫ್ಐಆರ್ ದಾಖಲು! ಕೌಟುಂಬಿಕ ಹಿಂಸೆ ಪ್ರಕರಣ

ಕಿರುತೆರೆ, ಬಾಲಿವುಡ್ ಮತ್ತು ಸೌತ್ ನಲ್ಲಿ ನಟನೆಗೆ ಫೇಮಸ್ ಆಗಿರುವ ಹನ್ಸಿಕಾ ಮೋಟ್ವಾನಿ ವಿರುದ್ಧ ಆಕೆಯ ಅತ್ತಿಗೆ ಸಂಕಷ್ಟ ತಂದೊಡ್ಡಿದ್ದಾಳೆ.

Hansika Motwani:  2020 ರಲ್ಲಿ, ನಟಿ ಹನ್ಸಿಕಾ ಅವರ ಸಹೋದರ ಪ್ರಶಾಂತ್ ಮೋಟ್ವಾನಿ ಟಿವಿ ನಟಿ ಮುಸ್ಕಾನ್ ನ್ಯಾನ್ಸಿ ಜೇಮ್ಸ್ ಅವರನ್ನು ವಿವಾಹವಾಗಿದ್ದು, ಆದರೆ ಇದೀಗ ಹನ್ಸಿಕಾ ಅವರ ಅತ್ತಿಗೆ ಮುಸ್ಕಾನ್ ತಮ್ಮ ಅತ್ತೆ ಜ್ಯೋತಿ ಮೋಟ್ವಾನಿ, ಪತಿ ಪ್ರಶಾಂತ್ ಮೋಟ್ವಾನಿ ಮತ್ತು ಸಹೋದರಿ ಹಂಸಿಕಾ ಮೋಟ್ವಾನಿ ವಿರುದ್ಧ ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮುಸ್ಕಾನ್ ಅವರು ಡಿಸೆಂಬರ್ 18 ರಂದು ಅಂಬೋಲಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 498-ಎ, 323, 504, 506 ಮತ್ತು 34 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

 

ಆಸ್ತಿ ವಿಚಾರದಲ್ಲಿ ನನಗೆ ಮೋಸ ಆಗಿದೆ ಎಂದು ಆರೋಪ ಮಾಡಿದ್ದಾರೆ. ಮುಸ್ಕಾನ್ ಅವರು ಪತಿ ಪ್ರಶಾಂತ್, ಹಂಸಿಕಾ ಮತ್ತು ಅತ್ತೆ ಅವರಿಂದ ಆಗಾಗ್ಗೆ ದುಬಾರಿ ಉಡುಗೊರೆಗಳು ಮತ್ತು ಹಣವನ್ನು ಕೇಳುತ್ತಿದ್ದರು ಎಂದು ಆರೋಪ ಮಾಡಿದ್ದಾರೆ. ಇದಲ್ಲದೇ ಮೂವರೂ ಆಸ್ತಿ ಸಂಬಂಧ ವಂಚನೆ ಮಾಡಿದ್ದಾರೆ ಎಂದು ಮುಸ್ಕಾನ್ ಆರೋಪಿಸಿದ್ದಾರೆ. ಪತಿ ನನಗೆ ಕಿರುಕುಳ ನೀಡುತ್ತಾರೆ, ಅತ್ತೆ, ನಾದಿನಿ ನನ್ನ ಮದುವೆ ವಿಚಾರದಲ್ಲಿ ಮೂಗು ತೂರಿಸುತ್ತಾರೆ ಎಂದು ಆರೋಪ ಮಾಡಿದ್ದಾರೆ. 2020 ರಲ್ಲಿ ಮುಸ್ಕಾನ್‌ ಮತ್ತು ಪ್ರಶಾಂತ್‌ ಮದುವೆಯಾಗಿತ್ತು. 2022 ರಲ್ಲಿ ಬೇರೆ ಬೇರೆಯಾಗಿದ್ದ ಇವರು, ಅಂದಿನಿಂದ ಇಂದಿನವರೆಗೂ ಹನ್ಸಿಕಾ, ಪ್ರಶಾಂತ್‌ ಆಗಲಿ ಒಂದು ಹೇಳಿಕೆಯನ್ನು ಮಾಧ್ಯಮದ ಮುಂದೆ ಹೇಳಿಲ್ಲ.

ಇದೀಗ ನಟಿ ಹನ್ಸಿಕಾ ಕುಟುಂಬದ ಜಗಳ ಬೀದಿಗೆ ಬಂದಿದ್ದು, ಮುಂದೇನಾಗುತ್ತೋ ಕಾದು ನೋಡಬೇಕಿದೆ.

Comments are closed, but trackbacks and pingbacks are open.