Earthquake in West Bengal: ನೇಪಾಳದಲ್ಲಿ 7.1 ತೀವ್ರತೆಯ ಭೂಕಂಪನ; ದೆಹಲಿ-ಯುಪಿ ಯಿಂದ ಬಿಹಾರ-ಬಂಗಾಳದವರೆಗೆ ನಡುಗಿದ ಭೂಮಿ

Earthquake in West Bengal: ಮಂಗಳವಾರ (ಜನವರಿ 7) ಟಿಬೆಟ್‌ನ ಶಿಗಾಟ್ಸೆ ನಗರದಲ್ಲಿ 6.9 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಭೂಕಂಪವು 9:05 am (0105 GMT) ಕ್ಕೆ ಸಂಭವಿಸಿದೆ. ಇದರ ತೀವ್ರತೆಯು 10 ಕಿಲೋಮೀಟರ್ ಆಗಿತ್ತು. ಟಿಬೆಟ್ ಹಾಗೂ ನೇಪಾಳದ ಕೆಲವು ಭಾಗಗಳಲ್ಲಿ ಕಂಪನದ ಅನುಭವವಾಗಿದೆ. ಬೆಳಗ್ಗೆ ದೇಶದ ಹಲವು ರಾಜ್ಯಗಳಲ್ಲಿ ಭೂಕಂಪನದ ಅನುಭವವಾಗಿದೆ. ಉತ್ತರ ಪ್ರದೇಶ, ಬಿಹಾರದಿಂದ ದೆಹಲಿಯವರೆಗೆ ಭೂಕಂಪನದ ಅನುಭವವಾಗಿದೆ.

 

ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಬೆಳಗ್ಗೆ 6:37ಕ್ಕೆ (ಜನವರಿ 7) ಭೂಕಂಪನವಾಗಿದೆ. ಇದು ಸುಮಾರು 15 ಸೆಕೆಂಡುಗಳ ಕಾಲ ಇತ್ತು. ಇದಲ್ಲದೆ, ಜಲ್ಪೈಗುರಿಯಲ್ಲಿ ಬೆಳಿಗ್ಗೆ 6:35 ಕ್ಕೆ ಮತ್ತು ಸ್ವಲ್ಪ ಸಮಯದ ನಂತರ ಕೂಚ್ ಬೆಹಾರ್‌ನಲ್ಲಿ ಕಂಪನವಾಗಿದೆ. ಇದಲ್ಲದೆ, ಬಿಹಾರದ ರಾಜಧಾನಿ ಪಾಟ್ನಾ ಹೊರತುಪಡಿಸಿ, ಇತರ ಕೆಲವು ಪ್ರದೇಶಗಳಲ್ಲಿಯೂ ಭೂಕಂಪನದ ಅನುಭವವಾಗಿದೆ. ಅದೇ ಸಮಯದಲ್ಲಿ, ದೆಹಲಿ-ಎನ್‌ಸಿಆರ್ ಮತ್ತು ಯುಪಿಯಲ್ಲೂ ಭೂಕಂಪನದ ಅನುಭವವಾಗಿದೆ.

ಬಿಹಾರದಲ್ಲಿ ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 5.1 ಎಂದು ಅಳೆಯಲಾಗಿದೆ. ಸಮಸ್ತಿಪುರ, ಮೋತಿಹಾರಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಬೆಳಗ್ಗೆ 6.40ಕ್ಕೆ ಭೂಕಂಪ ಸಂಭವಿಸಿದೆ. ಮಾಹಿತಿ ಪ್ರಕಾರ ಸುಮಾರು 5 ಸೆಕೆಂಡುಗಳ ಕಾಲ ಭೂಮಿ ಕಂಪಿಸುತ್ತಲೇ ಇತ್ತು. ಭೂಕಂಪನದ ಅಬ್ಬರ ಜೋರಾಗಿದ್ದು, ಜನರು ಭಯಭೀತರಾಗಿ ಮನೆಯಿಂದ ಹೊರಬರಲಾರಂಭಿಸಿದ್ದರು.

ನೇಪಾಳದಲ್ಲಿ ಬೆಳಗ್ಗೆ 6:35ಕ್ಕೆ ಪ್ರಬಲ ಭೂಕಂಪನದ ಅನುಭವವಾಗಿದೆ ಎಂದು ನೇಪಾಳ ಸರ್ಕಾರದ ಭೂವಿಜ್ಞಾನ ಇಲಾಖೆ ತಿಳಿಸಿದೆ. ಇದರ ಕೇಂದ್ರಬಿಂದುವು ನೇಪಾಳ-ಚೀನಾ ಗಡಿಯಲ್ಲಿರುವ ಟಿಬೆಟ್‌ನ ಡಿಂಗ್ಹೆ ಕಾಂಟಿಯಲ್ಲಿತ್ತು, ಅಲ್ಲಿ 7.0 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ಭೂಕಂಪದ ಪರಿಣಾಮ ನೇಪಾಳದ ಪೂರ್ವದಿಂದ ಮಧ್ಯ ಭಾಗದವರೆಗೆ ಕಾಣಿಸಿಕೊಂಡಿದ್ದು, ಕಠ್ಮಂಡು ಸೇರಿದಂತೆ ಹಲವು ಪ್ರದೇಶಗಳಲ್ಲಿ ಭೂಮಿ ಕಂಪಿಸಿದೆ.

ಕಠ್ಮಂಡುವಿನಲ್ಲಿ ಭೂಕಂಪದ ಪರಿಣಾಮ
ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿಯೂ ಪ್ರಬಲ ಭೂಕಂಪನವಾಗಿದ್ದು, ಜನರು ಭಯಭೀತರಾಗಿ  ತಮ್ನೆ ತಮ್ಮ ಮನೆಗಳಿಂದ ಹೊರಬಂದಿದ್ದಾರೆ. ಮುಂಜಾನೆ ಸಂಭವಿಸಿದ ಈ ಭೂಕಂಪನದಿಂದ ಜನ ಭಯಭೀತರಾಗಿದ್ದಾರೆ. ನೇಪಾಳದ ಇತರ ಜಿಲ್ಲೆಗಳಲ್ಲೂ ಈ ಭೂಕಂಪನವಾಗಿದ್ದು, ಯಾವುದೇ ಪ್ರಾಣ ಅಥವಾ ಆಸ್ತಿ ಹಾನಿಯಾದ ಬಗ್ಗೆ ಇನ್ನೂ ವರದಿಯಾಗಿಲ್ಲ, ಆದರೆ ಅಧಿಕಾರಿಗಳು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.

Comments are closed, but trackbacks and pingbacks are open.