Bangalore: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಸಿಲಿಂಡರ್ ಸ್ಫೋಟ! ಎರಡು ಅಂತಸ್ತಿನ ಕಟ್ಟಡದಲ್ಲಿ ಬ್ಲಾಸ್ಟ್
Bangalore: ಆನೇಕಲ್ ತಾಲೂಕಿನ ಕಿತ್ತಗಾನಹಳ್ಳಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ಎರಡು ಅಂತಸ್ತಿನ ಕಟ್ಟಡ ಬ್ಲಾಸ್ಟ್ ಆಗಿರುವ ಘಟನೆಯೊಂದು ನಡೆದಿದ್ದು, ಇಬ್ಬರು ಯುವಕರು ಈ ಮನೆಯಲ್ಲಿ ವಾಸವಿದ್ದರು.
ಓರ್ವನಿಗೆ ಗಾಯ, ಮತ್ತೋರ್ವನಿಗೆ ತಲೆ-ಕೈಕಾಲುಗಳಿಗೆ ಪೆಟ್ಟು ಬಿದ್ದಿದೆ. ಸ್ಪೋಟಕ್ಕೆ ಕಾರಣವೇನು ಅನ್ನೋದು ಇನ್ನೂ ತಿಳಿದು ಬಂದಿಲ್ಲ.
ಸೂರ್ಯನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ಮಾಡುತ್ತಿದ್ದಾರೆ. ಸ್ಥಳೀಯರು ಘಟನೆಯಿಂದ ಗಾಬರಿಯಾಗಿದ್ದು, ಇಡೀ ಕಟ್ಟಡ ಸ್ಫೋಟದ ಕಾರಣದಿಂದ ಧ್ವಂಸಗೊಂಡಿದೆ.
ಈಗ ಬಂದಿರುವ ಮಾಹಿತಿ ಪ್ರಕಾರ, ಸೋಮವಾರ ಬೆಳಗ್ಗೆ ಸಿಲಿಂಡರ್ ಸ್ಫೋಟಗೊಂಡು ಇಬ್ಬರಿಗೆ ಗಂಭೀರ ಗಾಯವಾಗಿದೆ. ಕೇರಳ ಮೂಲದ ಸುನೀಲ್ ಜೋಸೆಫ್, ವಿಷ್ಣು ಜಯರಾಜ್ ಎಂಬುವವರೇ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮನೆ ಗೋಡೆಗಳು, ಕಿಟಕಿ, ಬಾಗಿಲು, ಅಕ್ಕಪಕ್ಕದ ನಾಲ್ಕೈದು ಮನೆಗಳು, ಕೆಲವು ವಾಹನಗಳೂ ಸ್ಫೋಟದ ತೀವ್ರತೆಗೆ ಭಾರೀ ಹಾನಿಯಾಗಿದೆ.
Comments are closed, but trackbacks and pingbacks are open.