Mangalore: ಮೋಸ್ಟ್‌ ವಾಂಟೆಂಡ್‌ ನಕ್ಸಲ್‌ ಗ್ಯಾಂಗ್‌ ಶರಣಾಗತಿಗೆ ಸಜ್ಜು; ಯಾರೆಲ್ಲ? ಶರಣಾಗತಿಗಳ ಬೇಡಿಕೆಗಳೇನು?

Chikkamagaluru: ಭೂಗತರಾಗಿದ್ದ 6 ಮಂದಿ ನಕ್ಸಲೀಯರು ಈ ವಾರದ ಕೊನೆಯಲ್ಲಿ ಚಿಕ್ಕಮಗಳೂರಿನ ಜಿಲ್ಲಾಡಳಿತದ ಮುಂದೆ ಶರಣಾಗಲು ಮುಂದಾಗಿದ್ದಾರೆ. ಮುಂಡಗಾರು ಲತಾ, ಸುಂದರಿ ಕುಲ್ಲೂರು, ವನಜಾಕ್ಷಿ ಬಾಳೆಹೊಳೆ, ಆಂಧ್ರಪ್ರದೇಶ ಮೂಲದ ಮಾರೆಪ್ಪ ಅರೋಲಿ, ಕೆ.ವಸಂತ, ದಕ್ಷಿಣ ಭಾರತದ ಮೋಸ್ಟ್‌ ವಾಂಟೆಂಡ್‌ ನಕ್ಸಲ್‌ ಜೀಶ ಶರಣಾಗುವ ಸಮಯ ಹತ್ತಿರ ಬಂದಿದ್ದು, ದಿನಾಂಕ ಮಾತ್ರ ಬಾಕಿ ಉಳಿದಿದೆ.

 

ಇವರು ಮುಖ್ಯವಾಹಿನಿಗೆ ಬಂದರೆ ಮಲೆನಾಡು, ಕರಾವಳಿಯಲ್ಲಿ ನಕ್ಸಲೀಯರ ಅಧ್ಯಾಯ ಕೊನೆಗೊಳ್ಳುತ್ತದೆ. ಇವರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆ ತರುವ ಉದ್ದೇಶದಿಂದ ನಾಗರಿಕ ವೇದಿಕೆ ಅವರನ್ನು ಸಂಪರ್ಕಿಸುವ ಜೊತೆಗೆ ಸಿಎಂ ಸಿದ್ದರಾಮಯ್ಯ, ರಾಜ್ಯದ ಹಿರಿಯ ಪೊಲೀಸ್‌ ಅಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗಿತ್ತು. ಹಲವು ಹಂತಗಳಲ್ಲಿ ನಡೆದ ಮಾತುಕತೆ ಫಲಪ್ರದವಾಗಿದ್ದು, ಶರಣಾಗುವ ಹಂತಕ್ಕೆ ತಲುಪಿದೆ.

ರಾಜ್ಯ ಸರಕಾರ ಶರಣಾಗುವ ನಕ್ಸಲೀಯರಿಗೆ ವಿಶೇಷ ಪ್ಯಾಕೇಜನ್ನು ಘೋಷಣೆ ಮಾಡಿದೆ. ತಮ್ಮ ಮೇಲಿರುವ ಪ್ರಕರಣವನ್ನು ಕೈಬಿಡಬೇಕೆನ್ನುವ ನಕ್ಸಲರ ಬೇಡಿಯನ್ನು ಸರಕಾರ ಹಿಂದಕ್ಕೆ ಪಡೆಯುವುದಿಲ್ಲ ಎಂದು ಹೇಳಾಗುತ್ತಿದೆ. ನ್ಯಾಯಾಲಯಕ್ಕೆ ಓಡಾಡಲು ಬಸ್‌ನಲ್ಲಿ ಟಿಕೆಟ್‌ ಪಡೆಯಲು ಹಣ ಇಲ್ಲದೆ ತೊಂದರೆ ಅನುಭವಿಸುವುದರಿಂದ ಕೇಸುಗಳನ್ನು ಹಿಂದಕ್ಕೆ ಪಡೆಯ ಬೇಕೆಂದು ನಕ್ಸಲರು ಕೇಳಿದ್ದಾರೆ. ಹಾಗೂ ಮುಖ್ಯವಾಹಿನಿಗೆ ಬಂದ ನಂತರ ಜಾಮೀನಿನ ಮೇಲೆ ಹೊರಗೆ ಬರಲು ಸಹಕಾರ ನೀಡಬೇಕೆಂಬ ಮನವಿಗೆ ಸರಕಾರ ಸ್ಪಂದಿಸಿದೆ.

ಶರಣಾಗತಿಯ ಮುಖ್ಯ ಬೇಡಿಕೆಗಳ ವಿವರ ಇಲ್ಲಿದೆ;
– ಭೂ ರಹಿತ ಕುಟುಂಬಕ್ಕೆ 5 ಎಕರೆ ಕೃಷಿ ಭೂಮಿ ನೀಡಿ ಶಾಶ್ವತ ಹಕ್ಕು ಪತ್ರ ಕೊಡಬೇಕು.
– ಆದಿವಾಸಿ ಕುಟುಂಬಗಳಿಗೆ ಭೂಮಿ, ವಸತಿ ಕಲ್ಪಿಸಬೇಕು.
– ಕೃಷಿ ಯೋಗ್ಯ ಪಾಳು ಭೂಮಿಯನ್ನು ಭೂ ರಹಿತರಿಗೆ ಹಂಚಬೇಕು.
– ಕಸ್ತೂರಿ ರಂಗನ್ ವರದಿ ರದ್ದುಪಡಿಸಬೇಕು.

ರಾಜ್ಯದಲ್ಲಿ ಶರಣಾಗುವ ನಕ್ಸಲಿಯರಿಗೆ ರಾಜ್ಯ ಸರಕಾರ ಪ್ಯಾಕೇಜ್‌ ಜಾರಿಗೆ ತಂದಿದ್ದು, ಇದನ್ನು 3 ವಿಭಾಗಗಳಾಗಿ ವಿಭಾಗ ಮಾಡಲಾಗಿದೆ.
ಎ ವರ್ಗ: ಕರ್ನಾಟಕದಲ್ಲಿ ಜನನ, ಪ್ರಸಕ್ತ ಭೂಗತ, ಶಸ್ತ್ರಸಜ್ಜಿತರಾಗಿದ್ದು, ನಕ್ಸಲ್‌ ಗುಂಪಿನ ಸದಸ್ಯರಾಗಿದ್ದು, ಹಲವು ಪ್ರಕರಣಕ್ಕೆ ಭಾಗಿಯಾಗಿದ್ದರೆ ಅವರಿಗೆ ರೂ.7.50 ಲಕ್ಷ ಪ್ಯಾಕೇಜನ್ನು ಘೋಷಿಸಲಾಗಿದ್ದು, ಇದನ್ನು ಮೂರು ಹಂತದಲ್ಲಿ ನೀಡಲಾಗುವುದು. ಅಂದರೆ 3ಲಕ್ಷ, ಒಂದು ವರ್ಷದ ನಂತರ 2 ಲಕ್ಷ, ಎರಡು ವರ್ಷದ ನಂತರ 2.50 ಲಕ್ಷ.

ಬಿ ವರ್ಗ: ಹೊರರಾಜ್ಯದವರು, ಪ್ರಸ್ತಕ ಕರ್ನಾಟಕದಲ್ಲಿದ್ದು ಶಸ್ತಸಜ್ಜಿತರಾಗಿದ್ದು, ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದವರಿಗೆ 4 ಲಕ್ಷ ನೀಡಲಾಗುವುದು. ಶರಣಾಗತಿ ಆದಾಗ 2 ಲಕ್ಷ, ಒಂದು ವರ್ಷದ ನಂತರ 1ಲಕ್ಷ, ಎರಡು ವರ್ಷಗಳ ನಂತರ 1 ಲಕ್ಷ.

ಸಿ.ವರ್ಗ: ಎಡಪಂಥೀಯ ಭಯೋತ್ಪಾದನೆ ಬೆಂಬಲಿಸುವ, ಪ್ರಕರಣಗಳು ಇದ್ದರೆ 2 ಲಕ್ಷ ನೀಡಲಾಗುವುದು, ಶರಣಾಗತಿ ಸಂದರ್ಭದಲ್ಲಿ 1 ಲಕ್ಷ, ಒಂದು ವರ್ಷದ ನಂತರ 50 ಸಾವಿರ, ಎರಡು ವರ್ಷದ ನಂತರ ರೂ.50 ಸಾವಿರ.

ನಕ್ಸಲೀಯರು ತಮಗೆ ಮುಂದಿನ ಭವಿಷ್ಯಕ್ಕಾಗಿ ಉದ್ಯೋಗ ಮಾಡಲು ಬಯಸಿದರೆ ಅವರಿಗೆ ತರಬೇತಿ ನೀಡಲಾಗುವುದು, ಜೊತೆಗೆ ಒಂದು ವರ್ಷದವರೆಗೆ ಪ್ರತಿಯೊಬ್ಬರಿಗೆ 5 ಸಾವಿರ ನೀಡಲಾಗುವುದು.
– ಹೈಟೆಕ್ ಟೂರಿಸಂ ನಿಲ್ಲಿಸಬೇಕು.

Comments are closed, but trackbacks and pingbacks are open.