Mangaluru : ಯೂ ಟರ್ನ್ ಹೊಡೆಯುತ್ತಿದ್ದ ಲಾರಿಗೆ ಬೈಕ್ ಡಿಕ್ಕಿ – ಯುವಕ ಮೃತ್ಯು !!
Mangaluru : ಟಿಪ್ಪರ್ ಲಾರಿ ಮತ್ತು ಬೈಕಿನ ನಡುವೆ ಗಂಭೀರ ಅಪಘಾತ ಉಂಟಾಗಿ ಯುವಕನೋರ್ವ ಮೃತಪಟ್ಟ ಘಟನೆ ಮಂಗಳೂರಿನ(Mangaluru) ಬಳಿಯ ಕೋಣಾಜೆಯಲ್ಲಿ ನಡೆದಿದೆ.
ಅಸೈಗೋಳಿ ಬಳಿಯ ತಿಪ್ಲಪದವು ಎಂಬಲ್ಲಿ ತಿಪ್ಲಪದವು ಗ್ಯಾರೇಜ್ ಬಳಿಯಿಂದ ರಸ್ತೆಯಲ್ಲಿ ಲಾರಿ ಯುಟರ್ನ್ ಹೊಡೆಯುತ್ತಿದ್ದಾಗ ಅಸೈಗೋಳಿ ಕಡೆಯಿಂದ ಬರುತ್ತಿದ್ದ ಬೈಕ್ ನಡುವೆ ಢಿಕ್ಕಿ ಸಂಭವಿಸಿದೆ ಎಂದು ತಿಳಿದು ಬಂದಿದೆ. ಈ ವೇಳೆ ಯುವಕ ಮೃತಪಟ್ಟಿದ್ದಾನೆ ಮೃತ ಬೈಕ್ ಸವಾರನನ್ನು ದೇರಳಕಟ್ಟೆ ನಿವಾಸಿ ಜಲೀಲ್ ಮೆಡಿಕಲ್ ಎಂಬವರ ಪುತ್ರ ಅವ್ಸಾಫ್ (25) ಎಂದು ಗುರುತಿಸಲಾಗಿದೆ.
ಗಂಭೀರ ಗಾಯಗೊಂಡ ಬೈಕ್ ಸವಾರನನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಾಗಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Comments are closed, but trackbacks and pingbacks are open.